ಮಳೆ ಬಳಿಕ ಕುವೆಂಪು ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದ 10 ಕ್ಕೂ ಹೆಚ್ಚು ಬೈಕ್ ಗಳು ! ಕಾರಣವೇನು ?
ಶಿವಮೊಗ್ಗ : ನಗರದ ಹಲವು ಕಡೆ ನಿನ್ನೆ ಸಂಜೆ ಮಳೆಯಾಗಿದೆ. ಮಳೆಯಾದ ನಂತರ ನಗರದ ಕುವೆಂಪು ರಸ್ತೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಸಮೀಪ ಸರಿ ಸುಮಾರು 15 ಬೈಕ್ ಗಳು ಸ್ಕಿಡ್ ಆಗಿ ಬಿದ್ದಿರುವ ಘಟನೆ ನಡೆದಿದೆ.
ಮಳೆಗೆ ಮರದಿಂದ ಬಿದ್ದಿರುವ ಅಂಟು ದ್ರವದಿಂದ ರಸ್ತೆ ಜಾರುವಂತಾಗಿದೆ ಎಂದು ಶಂಕಿಸಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಬೈಕ್ ಸ್ಕಿಡ್ ಆಗುತ್ತಿರುವ ಜಾಗಕ್ಕೆ ಬ್ಯಾರಿಕೆಡ್ ಹಾಕಿ ಬೈಕ್ ಸವಾರರಿಗೆ ನಿದಾನವಾಗಿ ಚಲಿಸುವಂತೆ ಸೂಚಿಸಿದರು
ಸರಿ ಸುಮಾರು 15 ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದಿದ್ದು, ಹಲವು ದ್ವಿಚಕ್ರ ವಾಹನ ಸವಾರರಿಗೆ ಸಣ್ಣ ಪುಟ್ಟ ಗಾಯಗಳು ಆಗಿದೆ ಎಂದು ತಿಳಿದು ಬಂದಿದೆ. ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು. ಮರದಿಂದ ಬಿದ್ದ ಅಂಟು ದ್ರವದಿಂದಾಗಿ ಈ ಘಟನೆ ಸಂಭವಿಸಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply