ಬಂಡಾಯ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ನಾಮಪತ್ರ ಸಲ್ಲಿಕೆ ! ಉರಿ ಬಿಸಿಲಿನಲ್ಲೂ ಅಬ್ಬರದ ಮೆರವಣಿಗೆ !
ಶಿವಮೊಗ್ಗ : ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿ ಗುರುದತ್ತ ಹೆಗಡೆಗೆ ನಾಮಪತ್ರ ಸಲ್ಲಿಸಿದರು.
ಉರಿ ಬಿಸಿಲಿನಲ್ಲಿ ನಾಮಪತ್ರ ಸಲ್ಲಿಕೆಗೆ ತೆರದ ವಾಹನದಲಿ ಹೊರಟ ಮಾಜಿ ಡಿಸಿಎಂ ಈಶ್ವರಪ್ಪನವರಿಗೆ ಕಾರ್ಯಕರ್ತರು ಭರ್ಜರಿ ಸ್ವಾಗತ ಕೊರಿದ್ದಾರೆ, ಈಶ್ವರಪ್ಪನವರ ಮೆರವಣಿಗೆಯಲ್ಲಿ ಹೂವಿನ ಮಳೆ, ಪೇಪರ್ ಬ್ಲಾಸ್ಟ್ ಗಳ ಸುರಿಮಳೆ ಆಗಿತ್ತು
ಇನ್ನೂ ಮೆರವಣಿಗಯಲ್ಲಿ ಡೊಳ್ಳು, ರಾಮ, ಹನುಮಂತ ವೇಷಧಾರಿಗಳು ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಗಮನ ಸೆಳೆದವು. ರಾಮ ಹನುಮಂತ ವೇಷಧಾರಿಗಳ ಜೊತೆಗೆ ಕಾರ್ಯಕರ್ತರು ಸೆಲ್ಫಿ ತೆಗಿಸಿಕೊಂಡು ಸಂಭ್ರಮಿಸಿದರು
ನಾಮಪತ್ರ ಸಲ್ಲಿಕೆ ವೇಳೆ ಪತ್ನಿ ಜಯಲಕ್ಷ್ಮಿ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಮಾಜಿ ಪಾಲಿಕೆ ಸದಸ್ಯ ವಿಶ್ವಾಸ್, ಮಹಾಲಿಂಗ್ಗಯ್ಯ ಶಾಸ್ತ್ರೀ ಉಪಸ್ಥಿತರಿದ್ದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ -2024ರ ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್. ಈಶ್ವರಪ್ಪ ಅವರ ಉಮೇದುವಾರಿಕೆಯನ್ನು ಈಶ್ವರಪ್ಪ ಅತ್ಯಾಪ್ತ ಹಾಗೂ ಮಾಜಿ ಪಾಲಿಕೆ ಸದಸ್ಯ ವಿಶ್ವಾಸ್ ಸಲ್ಲಿಸಿದರು ನಂತರ ಮತ್ತೊಮ್ಮೆ ಕೆ ಎಸ್ ಈಶ್ವರಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply