ಓಮಿನಿ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಅಪಘಾತ ! ಮೂವರ ಧಾರುಣ ಸಾವು !

ಓಮಿನಿ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಅಪಘಾತ ! ಮೂವರ ಧಾರುಣ ಸಾವು !

ಶಿವಮೊಗ್ಗ : ತಾಲೂಕಿನ ಶಿವಮೊಗ್ಗ- ಶಿಕಾರಿಪುರ ರಾಜ್ಯ ಹೆದ್ದಾರಿ ಚಿನ್ನಿಕಟ್ಟೆ ಬಳಿ ಗುರುವಾರ ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಓಮಿನಿ ವಾಹನದ ಮಧ್ಯೆೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟು, ಬಸ್‌ನಲ್ಲಿದ್ದ ಹಲವರು ಗಾಯಗೊಂಡಿದ್ದಾರೆ.

ಓಮಿನಿಯಲ್ಲಿದ್ದ ಹರಮಘಟ್ಟದ ನಂಜುಂಡಪ್ಪ (83), ಸೂರಗೊಂಡನಕೊಪ್ಪದ ದೇವರಾಜ್ (27) ಚಾಲಕ ರಾಕೇಶ್ (30) ಮೃತರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಶಿಕಾರಿಪುರ ಕಡೆಯಿಂದ ವೇಗವಾಗಿ ಬರುತ್ತಿದ್ದ ಬಸ್ ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಓಮಿನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಓಮಿನಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಮೂವರು ದೇಹಗಳು ಛಿದ್ರಗೊಂಡಿವೆ. ಬಸ್‌ನ ಮುಂಭಾಗದ ಚಕ್ರಗಳು ಕಳಚಿ ಬಸ್ ಸೇತುವೆ ಮೇಲೇರಿ ನಿಂತಿದೆ.

ಗಾಯಗೊಂಡಿದ್ದ ಬಸ್ ಪ್ರಯಾಣಿಕರನ್ನು ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ತುರ್ತುವಾಹನದ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಕುರಿತು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವರದಿ : ಲಿಂಗರಾಜ್ ಗಾಡಿಕೊಪ್ಪ


Leave a Reply

Your email address will not be published.