ರಿದಂ ಡ್ಯಾನ್ಸ್ ಇನ್ಸ್ಟಿಟ್ಯೂಟ್ ವತಿಯಿಂದ – ಚಿಗುರು ಬೇಸಿಗೆ ಶಿಬಿರ 2024

ರಿದಂ ಡ್ಯಾನ್ಸ್ ಇನ್ಸ್ಟಿಟ್ಯೂಟ್ ವತಿಯಿಂದ – ಚಿಗುರು ಬೇಸಿಗೆ ಶಿಬಿರ 2024

ಶಿವಮೊಗ್ಗ : ಮಕ್ಕಳ ಪ್ರತಿಭೆಗೆ ಪೂರಕವಾಗಿರುವ ಮತ್ತು ಉತ್ತಮ ಚಟುವಟಿಕೆಗಳಿಂದ ಒಂದಿಲ್ಲೊಂದು ಕಾರ್ಯಕ್ರಮದಿಂದ ಸಕ್ರೀಯವಾಗಿರುವ ಸಂಸ್ಥೆಯಾದ ರಿದಂ ಡ್ಯಾನ್ಸ್ ಇನ್ಸ್ಟಿಟ್ಯೂಟ್, ಆನಂದಪುರ ಅವರು “ಚಿಗುರು – ಬೇಸಿಗೆ ಶಿಬಿರ 2024” ನ್ನು ಆಯೋಜಿಸಿದ್ದಾರೆ.

ವರ್ಷವಿಡೀ ನಡೆಯುವ ಶೈಕ್ಷಣಿಕ ಚಟುವಟಿಕೆಗಳಾದ ಶಾಲೆ, ಹೊಮ್ ವರ್ಕ್, ಟ್ಯೂಷನ್ ಗಳಿಂದ ಹಾಗೂ ವಾರ್ಷಿಕ ಪರೀಕ್ಷೆಗಳನ್ನು ಮುಗಿಸಿ ಅಲ್ಪ ವಿರಾಮದ ಈ ಬೇಸಿಗೆ ರಜೆಯ ಮಜವನ್ನು ಹೆಚ್ಚಿಸುವ ಜೊತೆ ಜೊತೆಗೆ ಮಕ್ಕಳ ದೈಹಿಕ ಮತ್ತು ಮಾನಸಿಕ ಆಲಸ್ಯವನ್ನು ಕಡಿಮೆ ಮಾಡಿ ಶಿಕ್ಷಣ ಮತ್ತು ಲವಲವಿಕೆಯ ಚಟುವಟಿಕೆಗಳ ಮೋಜಿನ ಸಮತೋಲನವನ್ನು ಒದಗಿಸುತ್ತವೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಕೇವಲ ನಗರ ಪ್ರದೇಶದ ಮಕ್ಕಳಿಗೆ ಸೀಮಿತವಾಗಿದ್ದ, ಮೋಜು ಮಸ್ತಿಯೊಂದಿಗೆ ಕಲಿಯಬಹುದಾದ ಪಠ್ಯೇತರ ಚಟುವಟಿಕೆಗಳನ್ನು ನಮ್ಮ ಗ್ರಾಮಿಣ ಭಾಗದ ಮಕ್ಕಳಿಗೂ ಕಲಿಸುವಲ್ಲಿ ಹೆಚ್ಚು ಹೆಚ್ಚು ಪೋಷಕರು ಆಸಕ್ತಿ ತೋರುತ್ತಿರುವುದು ಕಂಡುಬಂದಿದೆ.

ಚಿಗುರು ಬೇಸಿಗೆ ಶಿಬಿರದ ಉದ್ದೇಶ ಮತ್ತು ಸದುಪಯೋಗಗಳು: 

  •  ಮೊಬೈಲ್, ಟಿವಿ ಇಂದ ದೂರವಿದ್ದು, ಅಮೂಲ್ಯವಾದ ರಜಾ ಸಮಯವನ್ನು ಕಳೆಯಲು ಒಂದು ಮೋಜಿನ ಸ್ಥಳ.
  • ಸಕ್ರೀಯ – ಯಾಂತ್ರಿಕ ಶಿಕ್ಷಣ ಜೀವನದಿಂದ ಸಣ್ಣ ವಿರಾಮ ದೊರೆತು, ಮಾನಸಿಕ ಬುದ್ದಿ ಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
  • ಹೊಸ ಕೌಶಲ್ಯಗಳು, ಆರೋಗ್ಯಕರ ಚಟುವಟಿಕೆ ಇಂದ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆದು ಶಿಕ್ಷಣಕ್ಕೆ ಪೂರಕ ಮನಸ್ಥಿತಿ ದೊರೆಯುತ್ತದೆ.
  • ಶಿಬಿರಾರ್ಥಿಗಳಲ್ಲಿ ಹೊಸ ಸ್ನೇಹ ಸಂಬಂಧ ಬೆಳೆದು ಜೀವಮಾನದ ನೆನಪುಗಳನ್ನು ನಿರ್ಮಿಸಿಕೊಳ್ಳಲು ಸಹಕಾರಿಯಾಗಿದೆ.

2ವರ್ಷ ಪೂರೈಸುತ್ತಿರುವ ರಿದಂ ಡ್ಯಾನ್ಸ್ ಇನ್ಸ್ಟಿಟ್ಯೂಟ್ ಸಂಸ್ಥೆಯು ಕೆಲವೇ ಸಮಯದಲ್ಲಿ ಸ್ಥಳೀಯ ಮಕ್ಕಳಿಗೆ ಡ್ಯಾನ್ಸ್, ನಾಟಕಗಳಲ್ಲಿ ವಿಶೇಷ ತರಬೇತಿ ನೀಡಿ ಖಾಸಗಿ ವಾಹಿನಿಯ ಡಿಕೆಡಿ, ಡ್ರಾಮಾ ಜೂನಿಯರ್ಸ್, ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಗಳಲ್ಲದೆ, ಜಿಲ್ಲಾ ದಸರಾ ಉತ್ಸವ ಹಾಗೂ ಸ್ಥಳೀಯ ಕಾರ್ಯಕ್ರಮಗಳಲ್ಲಿ ಮಕ್ಕಳ ಪ್ರತಿಭೆ ಅನಾವರಣ ಮಾಡಲು ಪ್ರಮುಖ ವೇದಿಕೆಗಳನ್ನು ದೊರಕಿಸಿ ಕೊಡುತ್ತಿದೆ.

ವರದಿ : ಅಮಿತ್ ಆನಂದಪುರ


Leave a Reply

Your email address will not be published.