ಶಿವಮೊಗ್ಗ : ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಗೀತಾ ಶಿವರಾಜಕುಮಾರ್ ಇಂದು ನಾಮಪತ್ರ ಸಲ್ಲಿಸಿದ್ದಾರೆ,
ನಾಮಪತ್ರ ಸಲ್ಲಿಸುವ ವೇಳೆ ಬೃಹತ್ ಸಂಖ್ಯೆಯಲ್ಲಿ ಬೆಂಬಲಿಗರು ಮೆರವಣಿಗೆಯಲ್ಲಿ ಸೇರಿದ್ದರು. ನಗರದ ರಾಮಣ್ಣ ಶ್ರೇಷ್ಠ ಪಾರ್ಕ್ ನಿಂದ ಹೊರಟ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತ್ತು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ನಾಮಪತ್ರ ಸಲ್ಲಿಕೆ ವೇಳೆ ಆಯೋಜಿಸಲಾಗಿದ್ದ ಮೆರವಣಿಗೆಯಲ್ಲಿ, ವಾಹನದ ಮೇಲೆ ಅಳವಡಿಸಲಾಗಿದ್ದ ಎಲ್ಇಡಿ ಬೋರ್ಡ್ ಕುಸಿದು ಬಿದ್ದಿದೆ. ಪತ್ರಕರ್ತರಿಗೂ ಗಾಯಗಳಾಗಿದ್ದು, ಒಬ್ಬ ಮಹಿಳೆ ಸೇರಿ ನಾಲ್ವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ವ್ಯಕ್ತಿಯೊಬ್ಬರ ಒಬ್ಬರ ತಲೆ ಮೇಲೆ ಎಲ್ಇಡಿ ಬಿದ್ದಿದ್ದು ತೀವ್ರ ಪೆಟ್ಟಾಗಿದೆ, ಗಾಯಾಳುಗಳನ್ನು ಸ್ಥಳೀಯರೇ ಉಪಚರಿಸಿ ಆಟೋದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳಿಸಿದ್ದಾರೆ, ಎಲ್ಇಡಿ ಅಳವಡಿಸಿದ್ದ ವ್ಯಕ್ತಿಯ ವಿರುದ್ಧ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply