ಹುಷಾರ್..! ನೀನಿನ್ನೂ ಬಚ್ಚಾ ! ನಿನ್ನ ಗೊಡ್ಡು ಬೆದರಿಕೆಗೆ ನಾನು ಹೆದೋರಲ್ಲ  – ಕೆ ಎಸ್ ಈಶ್ವರಪ್ಪ ! ಬಿ ವೈ ವಿಜಯೇಂದ್ರ ವಿರುದ್ಧ ಕೆ ಎಸ್ ಈಶ್ವರಪ್ಪ ವಾಗ್ದಾಳಿ !

ಶಿವಮೊಗ್ಗ : ವಿಜಯೇಂದ್ರನ ಪುಕ್ಸಟ್ಟೆ ಮಾತುಗಳಿಗೆ ನಾನು ಬೆಲೆ ಕೊಡಲ್ಲ.ರಾಜ್ಯಾಧ್ಯಕ್ಷ ಆಗಿರುವುದಕ್ಕೆ ನಿನಗೇನು ಯೋಗ್ಯತೆ ಇದೆ.ನಲವತ್ತು ವರ್ಷ ಪಕ್ಷಕ್ಕಾಗಿ ನಾನು ಶ್ರಮ ಹಾಕಿದ್ದೇನೆ. ನಿಮ್ಮಪ್ಪನ ಶ್ರಮದಿಂದ ನೀನು ರಾಜ್ಯಾಧ್ಯಕ್ಷನಾಗಿದ್ದೀಯಾ.ಈ ರೀತಿ ಮಾತಾಡೋಕೆ ನಿನಗೆ ಯೋಗ್ಯತೆ ಇಲ್ಲ” ಎಂದು ಬಿಜೆಪಿ ರಾಜ್ಯಧಕ್ಷ ಬಿ ವೈ ವಿಜೇಯೇಂದ್ರ ವಿರುದ್ಧ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ನಿಮ್ಮಪ್ಪನ ಶ್ರಮದಿಂದ ನೀನು ರಾಜ್ಯಾಧ್ಯಕ್ಷ ಆಗಿದ್ದೀಯಾ.ನಾನು ಏನು ಮಾಡಿದ್ದೇನೆ ಎಂದು ಜಿಲ್ಲೆಯ ಜನಕ್ಕೆ ಗೊತ್ತಿದೆ. ಶಿಕಾರಿಪುರದಲ್ಲಿ 60 ಸಾವಿರ ಇದ್ದ ಲೀಡ್ 10 ಸಾವಿರಕ್ಕೆ ಇಳಿದಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

 ಹುಷಾರ್…. ನಾನು ಬೇರೆ ಭಾಷೆಯಲ್ಲಿ ಮಾತಾಡಬೇಕಾಗುತ್ತೇ… ಪಕ್ಷಕ್ಕೆ ನಿನ್ನ ಕೊಡುಗೆ ಏನು..? ನೀನು ಇನ್ನು ಬಚ್ಚಾ.. ನೆನಪಿಟ್ಟುಕೋ.. ನನಗೆ ಟೀಕೆ ಮಾಡೋ ಯೋಗ್ಯತೆ ನಿನಗೆ ಇಲ್ಲ, ಬಾಯಿಗೆ ಬಂದಂತೆ ಮಾತನಾಡಲು ಅವಕಾಶ ಕೊಟ್ಟಿಲ್ಲ, ಪಕ್ಷೇತರ ನಿಂತ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳೋದು ಏನು ಬಂತು…?

ಪಾರ್ಟಿಯಿಂದ ಹೊರಗೆ ಬಂದಾಯ್ತು ಎಂದರ್ಥ, ಅದರರ್ಥವು ಅವನಿಗೆ ಗೊತ್ತಿಲ್ಲ. ಏನ್ ಕ್ರಮ ತಗೋತ್ತಿಯಾ ತಗೋ ಇಂತಹ ಗೊಡ್ಡು ಬೆದರಿಕೆಗೆ ನಾನು ಹೆದರಲ್ಲ. ಜನ ನನ್ನ ಜೊತೆ ಇದ್ದಾರೆ. ಅಪ್ಪ – ಮಕ್ಕಳ ಶಿಕಾರಿ ನಾನು ಮಾಡುತ್ತೇನೆ ಎಂದ ಈಶ್ವರಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯರ್ಥವಾಗುತ್ತಿದೆ. ಇವತ್ತು ಕೋರ್ಟ್ ಮುಂಭಾಗದಲ್ಲಿ ವಕೀಲರನ್ನ ಭೇಟಿ ಮಾಡಿದ್ದೇನೆ. ವಕೀಲರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

ವರದಿ : ಲಿಂಗರಾಜ್ ಗಾಡಿಕೊಪ್ಪ


Leave a Reply

Your email address will not be published.