ಆನಂದಪುರ : ರಿದಂ ಡ್ಯಾನ್ಸ್ ಇನ್ಸ್ಟಿಟ್ಯೂಟ್ ಆನಂದಪುರಂ ರವರು ಹಮ್ಮಿಕೊಂಡಿದ್ದ “ಚಿಗುರು ಬೇಸಿಗೆ ಶಿಬಿರ 2024” ರ ಉದ್ಘಾಟನಾ ಸಮಾರಂಭವು ಯಶಸ್ವಿಯಾಗಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ PSI ಶಿವರಾಜ್ ಕಂಬಳಿ ಅವರು ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ಹೇಗೆ ಪಠ್ಯ ಚಟುವಟಿಕೆಗಳಿಗೆ ಪೂರಕವಾಗಿರುತ್ತವೆ ಎಂದು ವಿವರಿಸಿ ತಮ್ಮ ಬಾಲ್ಯದ ಬೇಸಿಗೆ ರಜೆಯನ್ನು ಮೆಲುಕು ಹಾಕಿಕೊಂಡರು.
ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಮೋಹನ್ ಕುಮಾರ್ ಅವರು ಮಾತನಾಡಿ ಒಂದು ಶಿಬಿರ/ಡ್ಯಾನ್ಸ್ ಕ್ಲಾಸ್ ನ್ನು ತೆರೆಯಲು, ನಡೆಸಲು ಬೇಕಾಗಿರುವ ಸಂಪನ್ಮೂಲಗಳು, ಪೂರ್ವಭಾವಿ ತಯಾರಿಗಳು ಎಷ್ಟು ಕಷ್ಟಕರವಾಗಿರುತ್ತದೆ ಎಂದು ಹಾಗೂ ಅದನ್ನೆಲ್ಲ ರಿದಂ ಡ್ಯಾನ್ಸ್ ಇನ್ಸ್ಟಿಟ್ಯೂಟ್ ಹೇಗೆ ನಡೆಸುತ್ತಿದೆ ಎಂದು ಸಂಕ್ಷಿಪ್ತವಾಗಿ ತಿಳಿಸಿದರು. ಸಾಧನ ಶಾಲೆಯ ಮುಖ್ಯಸ್ಥರಾದ ಶಂಕರ್ ನಾಯಕ್ ರವರು ಮಾತನಾಡಿ ಬೇಸಿಗೆ ಶಿಬಿರವು ಹೇಗೆ ಬದುಕಿನ ಶಿಬಿರವಾಗಬಹುದೆಂದು, ಉತ್ತಮ ಅಭ್ಯಾಸಗಳು/ಕಲೆಗಳು ಮನುಷ್ಯನ ಬದುಕಿಗೆ ಎಷ್ಟು ಅವಶ್ಯವಾಗಿದೆ ಎಂದು ತಿಳಿಸಿದರು.
ಆನಂದಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾಕ್ಟರ್ ಸೌಮ್ಯ ರವರು ಮಾತನಾಡಿ ಬೇಸಿಗೆ ಶಿಬಿರಗಳು ವೈಜ್ಞಾನಿಕವಾಗಿ ದೈಹಿಕವಾಗಿ ಹೇಗೆ ಮಕ್ಕಳ ಮನಸ್ಸನ್ನು ಸದೃಢಗೊಳಿಸುತ್ತವೆ ಎಂಬ ಸೂಕ್ಷ್ಮ ವಿಚಾರವನ್ನು ಪೋಷಕರ ಗಮನಕ್ಕೆ ತಂದರು. ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ರಾಜೇಂದ್ರ ಗೌಡ್ರು ಮಾತನಾಡಿ ಆನಂದಪುರದ ಗ್ರಾಮೀಣ ಭಾಗದ ಮಕ್ಕಳಿಗೆ ವಿವಿಧ ಕಲೆಯನ್ನು ಪರಿಚಯಿಸುತ್ತಿರುವ ಶಿಬಿರದ ಆಯೋಜಕರಿಗೆ ಹಾಗೂ ರಿದಂ ಡ್ಯಾನ್ಸ್ ಇನ್ಸ್ಟಿಟ್ಯೂಟ್ ಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಇನ್ಸ್ಟಿಟ್ಯೂಟ್ ಮಕ್ಕಳಿಂದ ಪ್ರದರ್ಶಿಸಲ್ಪಟ್ಟ ವಿವಿಧ ಬಗೆಯ ನೃತ್ಯ ಕಾರ್ಯಕ್ರಮಗಳು ಸಭಿಕರಿಂದ ಪ್ರಶಂಸಿಸಲ್ಪಟ್ಟಿತು. ಶಿಬಿರವು ಏಪ್ರಿಲ್ 15ರಿಂದ ಮೇ 5 ರವರೆಗೆ ಆನಂದಪುರದ ಸಾಧನ ವಿದ್ಯಾ ಕೇಂದ್ರದಲ್ಲಿರುವ ರಿದಂ ಡ್ಯಾನ್ಸ್ ಇನ್ಸ್ಟಿಟ್ಯೂಟ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಆನಂದಪುರ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಯುತ ಮೋಹನ್ ಕುಮಾರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಯುವರಾಜ್ ಕಂಬಳಿ, ಸಾಧನ ವಿದ್ಯಾ ಕೇಂದ್ರದ ಮುಖ್ಯಸ್ಥರಾದ ಶಂಕರ್ ನಾಯಕ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ||ಸೌಮ್ಯ, ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ರಾಜೇಂದ್ರ ಗೌಡ್ರು, ಇನ್ಸ್ಟಿಟ್ಯೂಟ್ ನ ಮುಖ್ಯಸ್ಥರಾದ ಪ್ರವೀಣ್ ಕುಮಾರ್ ಹಾಗೂ ಶಿಬಿರಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.
ಶಿಬಿರದ ವಿಶೇಷತೆ ಗಳೇನು ?
ಮೊಬೈಲ್, ಟಿವಿ ಇಂದ ದೂರವಿದ್ದು, ಅಮೂಲ್ಯವಾದ ರಜಾ ಸಮಯವನ್ನು ಕಳೆಯಲು ಒಂದು ಮೋಜಿನ ಸ್ಥಳ.
ಸಕ್ರೀಯ – ಯಾಂತ್ರಿಕ ಶಿಕ್ಷಣ ಜೀವನದಿಂದ ಸಣ್ಣ ವಿರಾಮ ದೊರೆತು, ಮಾನಸಿಕ ಬುದ್ದಿ ಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಹೊಸ ಕೌಶಲ್ಯಗಳು, ಆರೋಗ್ಯಕರ ಚಟುವಟಿಕೆ ಇಂದ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆದು ಶಿಕ್ಷಣಕ್ಕೆ ಪೂರಕ ಮನಸ್ಥಿತಿ ದೊರೆಯುತ್ತದೆ.
ಶಿಬಿರಾರ್ಥಿಗಳಲ್ಲಿ ಹೊಸ ಸ್ನೇಹ ಸಂಬಂಧ ಬೆಳೆದು ಜೀವಮಾನದ ನೆನಪುಗಳನ್ನು ನಿರ್ಮಿಸಿಕೊಳ್ಳಲು ಸಹಕಾರಿಯಾಗಿದೆ.
2ವರ್ಷ ಪೂರೈಸುತ್ತಿರುವ ರಿದಂ ಡ್ಯಾನ್ಸ್ ಇನ್ಸ್ಟಿಟ್ಯೂಟ್ ಸಂಸ್ಥೆಯು ಕೆಲವೇ ಸಮಯದಲ್ಲಿ ಸ್ಥಳೀಯ ಮಕ್ಕಳಿಗೆ ಡ್ಯಾನ್ಸ್, ನಾಟಕಗಳಲ್ಲಿ ವಿಶೇಷ ತರಬೇತಿ ನೀಡಿ ಖಾಸಗಿ ವಾಹಿನಿಯ ಡಿಕೆಡಿ, ಡ್ರಾಮಾ ಜೂನಿಯರ್ಸ್, ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಗಳಲ್ಲದೆ, ಜಿಲ್ಲಾ ದಸರಾ ಉತ್ಸವ ಹಾಗೂ ಸ್ಥಳೀಯ ಕಾರ್ಯಕ್ರಮಗಳಲ್ಲಿ ಮಕ್ಕಳ ಪ್ರತಿಭೆ ಅನಾವರಣ ಮಾಡಲು ಪ್ರಮುಖ ವೇದಿಕೆಗಳನ್ನು ದೊರಕಿಸಿ ಕೊಡುತ್ತಿದೆ.
ವರದಿ : ಅಮಿತ್ ಆನಂದಪುರ
Leave a Reply