ಶಿವಮೊಗ್ಗ : ತಾಲೂಕಿನ ಹೊಳೆಹೊನ್ನೂರಿನ ಅಗರದಹಳ್ಳಿಯ ಕ್ರಾಸ್ ಬಳಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ನೆನ್ನೆ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು. ಮುಂದೆ ಹೋಗುತ್ತಿದ್ದ ಬೈಕ್ ಏಕಾಏಕಿ ತಿರುವು ಪಡೆದಿದ್ದರಿಂದ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಹಿಂಬದಿ ಬೈಕ್ ಸವಾರರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಮೃತರನ್ನು ತೀರ್ಥಹಳ್ಳಿಯ ಮೂಲದವರು ಎಂದು ಗುರುತಿಸಲಾಗಿದ್ದು. ಎಚ್ ಆರ್ ಧನುಷ್ ( 24), ಮತ್ತು ಈತನ ಸ್ನೇಹಿತ ಮೃತಪಟ್ಟಿರುತ್ತಾರೆ , ಆತನ ಸ್ನೇಹಿತನ ಹೆಸರು ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply