ಆನಂದಪುರ : ನೆನ್ನೆ ಸಂಜೆ ಬೀಸಿದ ವಿಪರೀತ ಗಾಳಿ ಮಳೆಯ ಅಬ್ಬರಕ್ಕೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವ ಘಟನೆ ಸಾಗರ ತಾಲೂಕಿನ ಅನಂದಪುರದಲ್ಲಿ ನಡೆದಿದೆ
ನೆನ್ನೆ ಸಂಜೆಯಿಂದಲೂ ವಿಪರೀತವಾದ ಗಾಳಿ ಹಾಗೂ ಮಳೆಗೆ ಜನರು ನಲುಗಿದ್ದಾರೆ.ಇಂತಹ ಸಂದರ್ಭದಲ್ಲಿ ನೆನ್ನೆ ಸಂಜೆ ಬಿದ್ದ ಮಳೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಅನಂದಪುರ ಸಮೀಪದ ಮುಂಬಾಳಿನಲ್ಲಿ ಒಂದು ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ.
ಇದರಿಂದ ವಾಹನದಟ್ಟನೆ ಹೆಚ್ಚಾಗಿ ಸಂಚಾರಕ್ಕೂ ಸಹ ತೊಂದರೆ ಉಂಟಾಗಿದೆ.ಗಂಟೆಗಟ್ಟಲೆ ಕಾಲ ಟ್ರಾಫಿಕ್ ಜಾಮ್ ಹಿನ್ನಲೆಯಲ್ಲಿ ಸಾರ್ವಜನಿಕರು ಹಾಗೂ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ವರದಿ : ಅಮಿತ್ ಆನಂದಪುರ
Leave a Reply