ಶಿವಮೊಗ್ಗ : ಬಿರು ಬಿಸಿಲಿಗೆ ಬೆಸತ್ತು ಸಾಕಪ್ಪಾ ಸಾಕು ಈ ಸೆಕೆ ಎನ್ನುತ್ತಿರುವ ಮಲೆನಾಡಿಗರಿಗೆ ಮಳೆರಾಯ ತಂಪೆರೆದಿದ್ದಾನೆ. ಶಿವಮೊಗ್ಗ ನಗರದಲ್ಲಿ ಸುಮಾರು ಅರ್ಧಗಂಟೆ ಮಳೆ ಸುರಿದಿದ್ದು, ಸಂಜೆ ವೇಳೆ ಸುರಿದ ಮಳೆಗೆ ನಗರದಲ್ಲಿ ಕೂಲ್ ಕೂಲ್ ವಾತಾವರಣ ನಿರ್ಮಾಣವಾಗಿದೆ.
ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ವರ್ಷಧಾರೆಯಾಗಿದ್ದು ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯಾದ್ಯಂತ 38 ರಿಂದ 40 ಡಿಗ್ರಿ ತಾಪಮಾನ ತಲುಪಿತು. ಬಿಸಿಲಿಗೆ ಜನರು ಹೈರಾಣಾಗಿದ್ದರು. ಇದೀಗ ಶಿಕಾರಿಪುರ ತೀರ್ಥಹಳ್ಳಿ ಹೊಸನಗರ ಸಾಗರ ಸೇರಿದಂತೆ ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯಾಗಿದೆ
ಇನ್ನು ಜಿಲ್ಲೆಯಲ್ಲಿ ಪ್ರಾರಂಭವಾದ ಮಳೆಗೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಬಳಿ ಮರ ಬಿದ್ದು ಓರ್ವ ವ್ಯಕ್ತಿ ಸಾವುಕಂಡಿರುವ ಘಟನೆ ನಡೆದಿದ್ದು.ಆಗುಂಬೆ ಘಾಟಿಯ ಮೂರನೇ ತಿರುವಿನಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ ಮತ್ತು ಸಾಗರದ ಅನಂದಪುರದಲ್ಲು ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಟ್ರಾಫಿಕ್ ಜಾಮ್ ಉಂಟಾಗಿತ್ತು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply