ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರಿಗೆ ಚಿಹ್ನೆ ಯನ್ನು ಇಂದು ಚುನಾವಣಾ ಆಯೋಗ ಪ್ರಕಟಿಸಿದೆ
ಕೈ ಕಟ್ಟಿರುವ ರೈತ ಮತ್ತು ಹಿಂದೆ ಕಬ್ಬಿನಜಲ್ಲೆ ಇರುವ ಚಿಹ್ನೆಯನ್ನು ಕೆ ಎಸ್ ಈಶ್ವರಪ್ಪನವರಿಗೆ ಚುನಾವಣಾ ಆಯೋಗ ಇಂದು ನೀಡಿದೆ
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಇಲ್ಲಿಯವರೆಗೂ ತಮ್ಮ ಚುನಾವಣಾ ಪ್ರಚಾರಗಳಲ್ಲಿ ಮೋದಿ ಫೋಟೋವನ್ನು ಬಳಸುತ್ತಿದ್ದರು. ಈ ವಿಚಾರವಾಗಿ ಬಿಜೆಪಿ ಕೋರ್ಟ್ ಮೊರೆ ಹೋಗಿತ್ತು. ಇದೀಗ ಈಶ್ವರಪ್ಪನವರಿಗೆ ಚಿಹ್ನೆ ದೊರೆತಿದ್ದು ಇನ್ನು ಮುಂದೆ ತಮ್ಮ ಎಲ್ಲಾ ಚುನಾವಣಾ ಪ್ರಚಾರಗಳಲ್ಲಿ ಈಶ್ವರಪ್ಪ ಚುನಾವಣಾ ಆಯೋಗ ಕೊಟ್ಟಿರುವಂತಹ ಚಿಹ್ನೆ ಯನ್ನು ಬಳಸಲಿದ್ದಾರೆ
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply