ಶಿವಮೊಗ್ಗ : ಹಾಸನದ ಪ್ರತಿಷ್ಠಿತ ಕುಟುಂಬದ ರಾಜಕಾರಣಿಯೊಬ್ಬನ ಮೇಲೆ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಯುವ ರಾಜಕಾರಣಿಯೊಬ್ಬ ನೂರಾರು ಬಡ ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿದ್ದಾನೆ ಎಂಬ ಸುದ್ಧಿಗಳು ಹೊರಬರುತ್ತಿವೆ. ಇದು ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತಹದ್ದು ಎಂದು ಹೇಳಿದರು
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ನೇಹಾ ಹತ್ಯೆಯನ್ನ ಖಂಡಿಸುವ ನಾವು ಮನೆಕೆಲಸಕ್ಕೆ ಬಂದ ಹೆಣ್ಣುಮಗಳು ಕೈ ಮುಗಿದು ಕೇಳಿದರೂ ಅತ್ಯಾಚಾರ ನಡೆಯುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಮಹಿಳೆಯ ಬಗ್ಗೆ ಉಗ್ರವಾಗಿ ಮಾತನಾಡುವ ಬೇರೆಯವರು ಈ ಮಹಿಳೆಯ ಮೇಲೆ ಸರಣಿ ಅತ್ಯಾಚಾರ ನಡೆದಿರುವುದು ಯಾಕೆ ಮಾತನಾಡುತ್ತಿಲ್ಲ ಎಂದು ಹೇಳಿದರು
ಆತನಬಲೆಗೆ ಬಿದ್ದವರು ಬಡವರು, ಮುಸುರೆ ತಿಕ್ಕಲು ಬಂದವರು ಇದ್ದಾರೆ. ಅಷ್ಟೇ ಅಲ್ಲ, ಮಹಿಳಾ ಪೊಲೀಸರೊಬ್ಬರನ್ನು ಕೂಡ ಇದಕ್ಕೆ ಬಳಸಿಕೊಳ್ಳಲಾಗಿದೆ. ಒತ್ತಡ ಕಾರಣಕ್ಕೋಸ್ಕರ ಮಹಿಳಾಪೊಲೀಸ್ ಸಹ ಸ್ವ ಇಚ್ಚೆಯಿಂದಲೋ ಒತ್ತಡಕ್ಕೆ ಮಣಿದು ಬೆತ್ತಲಾಗಿರುವ ದೃಶ್ಯಗಳು ಕಂಡು ಬಂದಿದೆ. ಸೊಮೋಟೋ ಪ್ರಕರಣ ದಾಖಲಾಗುತ್ತಿಲ್ಲ ಅನ್ಯಾಯಕ್ಕೊಳಗಾದ ಹೆಣ್ಣುಮಕ್ಕಳು ಅಸಹಾಯಕರಾಗಿರುವುದರಿಂದ ದೂರು ನೀಡಲು ಕೂಡ ಅವರು ಭಯ ಪಡುತ್ತಿದ್ದಾರೆ. ಹೀಗಾಗಿ ಸರ್ಕಾರ ಮಧ್ಯಪ್ರವೇಶಿಸಬೇಕು’ ಎಂದು ಆಗ್ರಹಿಸಿದರು.
ನಾರಿಶಕ್ತಿಯ ಬಗ್ಗೆ ನಮಾತನಾಡುವ ಬಿಜೆಪಿ ಮೌನಕ್ಕೆ ಜಾರಿದ್ದೇಕೆ? ಮೈತ್ರಿ ಅಭ್ಯರ್ಥಿ ಅಂತಲೋ? ಕೂಲಿ ಕಾರ್ಮಿಕ ಮಹಿಳೆಯ ಮೇಲೆ ನಡೆದ ಅತ್ಯಾಚಾರವನ್ನ ಖಂಡಿಸುವೆ ಸ್ವಯಂ ಘೋಷಿತ ಹಿಂದೂ ವೀರರು, ಕುಂಕುಮ ಅಳಸಿಕೊಂಡಿದ್ದಕ್ಕೆ ಕ್ಷಮೆ ಕೇಳ ಬೇಕು ಎಂದು ಆಗ್ರಹಿಸುವವರು, ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಮಾನ ಹರಾಜಾಗುತ್ತಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣರಾದವರಿಂದ ಪತ್ನಿಯ ಹಣೆಯ ಮೇಲಿನ ಕುಂಕುಮ ಅಳಸಿಹೋಗಿದೆಯಲ್ಲಾ? ಉದ್ರೇಕಕಾರಿ ಚುನಾವಣೆ ನಡೆಸಲು ಬಯಸಿದ್ದಾರೆ ಇದು ಖಂಡನೀಯ ಎಂದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply