ಶಿವಮೊಗ್ಗ : ಜಿಲ್ಲೆಯಲ್ಲಿ ಮನೆ ಕಳ್ಳತನ, ದರೋಡೆ ಸೇರಿದಂತೆ ಪ್ರಮುಖ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ತಲೆನೋವು ತಂದಿಡುತ್ತಿದ್ದ ಸುರೇಶ್ ಅಲಿಯಾಸ್ ಮೆಂಟಲ್ ಸೂರಿ(45)ಯನ್ನ ಕಳೆದ ಶನಿವಾರ ಅಂದರೆ 20 ನೇ ತಾರೀಖು ಶಿವಮೊಗ್ಗ ನಗರದ ಬಾಪೂಜಿ ನಗರದ ಗಂಗಮ್ಮ ದೇವಸ್ಥಾನದ ಪಕ್ಕದಲ್ಲಿ ಕೊಲೆಯಾಗಿ ಬಿದ್ದಿದ್ದ ಸೂರಿಯನ್ನು ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್ನಿಂದ ಹೊಡೆದು ಕೊಲೆ ಮಾಡಲಾಗಿತ್ತು.
ಎಲೆಕ್ಷನ್ ಟೈಂ ಆದ್ದರಿಂದ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಇದೀಗ ಪ್ರಕರಣದ ತಿರುಳನ್ನ ಇದೀಗ ಪೊಲೀಸರು ಹೊರತೆಗೆದಿದ್ದಾರೆ. ಪ್ರಕರಣದ ಸಂಬಂಧ ಮೃತನ ಸಂಬಂಧಿ ಮತ್ತು ಆತನ ಸ್ನೇಹಿತ ಮತ್ತು ಮೃತನ ಅಪ್ರಾಪ್ತ ಮಗ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಅಂದು ನಡೆದಿದ್ದೇನು ?
ಅಂದು ಬೈಕ್ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು, ದಾಳಿಯ ಅರಿವೇ ಇಲ್ಲದೇ ನಿಂತಿದ್ದ ಸೂರಿ ಮೇಲೆ, ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್ನಿಂದ ದಾಳಿ ಮಾಡಿದ್ದರು. ಗಂಭೀರ ಗಾಯಗೊಂಡಿದ್ದ ಮೆಂಟಲ್ ಸೂರಿ ಸ್ಥಳದಲ್ಲೇ ಹೆಣವಾಗಿದ್ದನು. ಇದೊಂದು ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಮೃತನ ಸಂಬಂಧಿ ಹಾಗೂ ಮೃತನ ಅಪ್ರಾಪ್ತ ಮಗನೂ ಸೇರಿ ಹತ್ಯೆ ಮಾಡಿದ್ದಾರೆಂದು ಮೃತನ ಸಹೋದರಿ ಆರೋಪ ಮಾಡಿದ್ದರು.
ಒಂದೆಡೆ ಕುಡಿದು ಬಂದು ರಂಪಾಟ ಮಾಡುತ್ತಿದ್ದ ಮೆಂಟಲ್ ಸೂರಿ. ಮತ್ತೊಂದಡೆ ಪತ್ನಿಗೆ ತಲೆನೋವು ಆಗಿದ್ದ. ಇತನ ರಾಕ್ಷಸೀಯ ವರ್ತನೆ ನೋಡಿದ ಪತ್ನಿ ಮತ್ತು ಮಗ ಹಾಗೂ ಸಂಬಂಧಿ ಬೆಚ್ಚಿಬಿದ್ದಿದ್ದರು. ಇತ ಗಲಾಟೆ ,ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ರೆ, ಕುಟುಂಬಕ್ಕೆ ನೆಮ್ಮದಿ. ಜೈಲ್ನಿಂದ ಬಂದ್ರೆ ಸಾಕು ಕುಟುಂಬದಲ್ಲಿ ನರಕ. ಈ ನಡುವೆ ಸಂಬಂಧಿ ಮತ್ತು ಮೃತನ ಪತ್ನಿಯ ನಡುವೆ ಅನೈತಿಕ ಸಂಬಂಧ ಇತ್ತು ಎಂದು ಮೃತನ ಕುಟುಂಬಸ್ಥರು ಮತ್ತು ಸ್ಥಳೀಯರು ಆರೋಪ ಮಾಡಿದ್ದಾರೆ. ಇದೇ ಕಾರಣಕ್ಕೆ ಪ್ಲ್ಯಾನ್ ಮಾಡಿ ಸೂರಿ ಕೊಲೆ ಮಾಡಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ
ಕೊಲೆಯಾದ ದಿನ ಮದ್ಯಾಹ್ನ ಮೂವರು ಎಣ್ಣೆ ಹೊಡೆದಿದ್ದಾರೆ. ಈ ನಡುವೆ ಸೂರಿ ಮತ್ತು ಪತ್ನಿ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ಸಂಬಂಧಿ ಎಂಟ್ರಿ ಕೊಟ್ಟಿದ್ದನು. ಸೂರಿಗೆ ಎಷ್ಟೇ ಬುದ್ದಿ ಹೇಳಿದ್ರೂ ಆತನ ಬದಲಾಗಲಿಲ್ಲ. ಇದರಿಂದ ಒಬ್ಬನೇ ಮನೆಯಿಂದ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬೈಕ್ ಮೇಲೆ ಬಂದ ಮೂವರು ಸೇರಿ ಕ್ರಿಕೆಟ್ ಬ್ಯಾಟ್ ಮತ್ತು ವಿಕೆಟ್ ನಿಂದ ಹೊಡೆದಿದ್ದಾರೆ ಇದರ ಪರಿಣಾಮ ಮೆಂಟಲ್ ಸೂರಿ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಪ್ರಕರಣದ ತನಿಖೆಯನ್ನು ಆರಂಭಿಸಿದ ಕೋಟೆ ಪೊಲೀಸರು ಬಂಧಿಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply