ಆನಂದಪುರ : ಮಲಂದೂರು ಗ್ರಾಮದ ಮೊದಲನೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮಂಜುನಾಥ್ ನೇಮಕವಾಗಿದ್ದಾರೆ
ಆನಂದಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಂಗ್ರೆಸ್ ಉಸ್ತುವಾರಿ ಆದಂತಹ ಸೋಮಶೇಖರ್ ಲಾವಿಗೆರೆ ನಿನ್ನೆ ಆನಂದಪುರದ ದಾಸಕೊಪ್ಪದಲ್ಲಿ ಗ್ರಾಮಸ್ಥರ ಸಭೆಯನ್ನು ಸೇರಿ ಅಲ್ಲಿ ಹೊಸ ಮಂತ್ರಿಮಂಡಲವನ್ನ್ನು ಗ್ರಾಮದಲ್ಲಿ ನಿರ್ಮಿಸಿದರು.
ಬಹು ದಿನಗಳಿಂದ ಕಾಂಗ್ರೆಸ್ ಅಧ್ಯಕ್ಷರ ಹುದ್ದೆ ಕಾಲಿ ಇದ್ದು ಅದನ್ನು ಗ್ರಾಮದ ಸರ್ವ ಸದಸ್ಯರ ಒಮ್ಮತದ ಮೇರೆಗೆ ಜನಸ್ನೇಹಿ, ಹಾಗೂ ಯುವ ಕಣ್ಮಣಿ ಆದಂತಹ ಮಂಜುನಾಥ್ ಅವರನ್ನು ಸೋಮಶೇಖರ್ ಲಾವಿಗೆರೆ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಹಾಗೆ ಉಪಾಧ್ಯಕ್ಷರು ಸದಸ್ಯರು ಹಾಗೂ ಇನ್ನಿತರ ಹುದ್ದೆಗಳಿಗೆ ಸಹ ನೇಮಕವನ್ನು ಗ್ರಾಮಸ್ಥರ ಸರ್ವ ಒಮ್ಮತದ ನೇಮಕವನ್ನು ಮಾಡಿದರು.
ವರದಿ : ಅಮಿತ್ ಆನಂದಪುರ
Leave a Reply