ಕೆ ಎಸ್ ಈಶ್ವರಪ್ಪ  ಕಚೇರಿ ಎದುರು ವಾಮಾಚಾರ ! ನಿಂಬೆ ಹಣ್ಣಿನ ಮೇಲೆ ಕೆ.ಎಸ್.ಈ ಅಂತ ಬರೆದು ವಾಮಾಚಾರ !

ಶಿವಮೊಗ್ಗ : ಈಶ್ವರಪ್ಪ ಪುತ್ರ ಕೆಇ ಕಾಂತೇಶ್ ಗೆ ಹಾವೇರಿ ಲೋಕಸಭಾ ಟಿಕೆಟ್ ತಪ್ಪಿದ ಕಾರಣದಿಂದಾಗಿ, ಬಿಎಸ್ ವೈ ಕುಟುಂಬದ ವಿರುದ್ಧ ಕೆಂಡಮಂಡಲರಾಗಿದ್ದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಬಿಜೆಪಿಯಿಂದ ಸಿಡಿದು ಬಂಡಾಯವೆದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಜೊತೆಗೆ ಪ್ರಚಾರ ಕಾರ್ಯ ಕೂಡ ಬಿರಿಸಿನಿಂದ ಸಾಗಿದೆ ಇದರ ಮಧ್ಯೆ  

ಶಿಕಾರಿಪುರದಲ್ಲಿ ಲೋಕಸಭಾ ಚುನಾವಣೆ ಸಂಬಂಧ ಚುನಾವಣಾ ಕಾರ್ಯಗಳಿಗಾಗಿ ಆರಂಭಿಸಿದಂತಹ ಕಚೇರಿಯ ಮುಂಭಾಗ ನಿಂಬೆ ಹಣ್ಣಿನ ಮೇಲೆ ಕೆ ಎಸ್ ಇ ಎಂದು ಬರೆದು ವಾಮಾಚಾರ ಮಾಡಿಸಲಾಗಿದೆ, ನಿಂಬೆಹಣ್ಣು, ಅರಿಶಿಣ, ಕುಂಕುಮ ಸೇರಿ ಹಲವು ವಸ್ತು ಪತ್ತೆಯಾಗಿದೆ. ಕಳೆದ ರಾತ್ರಿ ವಾಮಾಚಾರ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ.‌

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೆ ಎಸ್ ಈಶ್ವರಪ್ಪ ಅವರು,ಸೋಲಿನ ಭಯದಿಂದ ಅಪ್ಪ‌-ಮಕ್ಕಳು ರಾಷ್ಟ್ರ ಭಕ್ತರ ಚುನಾವಣಾ ಕಛೇರಿಗೆ ವಾಮಾಚಾರ ಮಾಡಿದ್ದಾರೆ. ಜನ ತಿರಸ್ಕಾರ ಮಾಡಿರುವುದು ಅಪ್ಪಮಕ್ಕಳ ಗಮನಕ್ಕೆ ಬಂದಿದೆ. ಹೀಗಾಗಿ ಈ ರೀತಿಯ ಕೃತ್ಯ ಮಾಡುತ್ತಿದ್ದಾರೆ. ದೇವರು-ಧರ್ಮ ನನ್ನ ಬೆಂಬಲಕ್ಕೆ ಇದೆ. ವಾಮಾಚಾರ ಮಾಡುವ ಯಡಿಯೂರಪ್ಪ ವಿರುದ್ದ ಕಾರ್ಯಕರ್ತರು ಕೆಲಸ‌ ಮಾಡುತ್ತಾರೆ. ನೂರಕ್ಕೆ ನೂರು ಗೆಲ್ಲುತ್ತೇನೆ ಎಂದರು.

ವರದಿ : ಲಿಂಗರಾಜ್ ಗಾಡಿಕೊಪ್ಪ

 


Leave a Reply

Your email address will not be published.