ಶಿವಮೊಗ್ಗ : ಇಂದು ಶಿವಮೊಗ್ಗ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಲೋಕಸಭಾ ಚುನಾವಣಾ ಕಣ ರಂಗೇರಿದೆ, ಇದರ ನಡುವೆ ಮತ ಕೇಂದ್ರದಲ್ಲಿ ಮೊಬೈಲ್ ನಿಷೇಧವಿದ್ದರೂ ಮತ ಚಲಾಯಿಸುವ ವಿಡಿಯೋ ಒಂದು ವೈರಲ್ ಆಗಿದೆ ಮತದಾನದ ವೀಡಿಯೋ, ಪೋಟೋ ತೆಗೆದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿದ್ರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿಯೂ ಎಚ್ಚರಿಕೆ ನೀಡಿತ್ತು. ಆದರೂ ಎರಡು ವಿಡಿಯೋ ವೈರಲ್ ಆಗುತ್ತಿದೆ
ಒಂದು ವಿಡಿಯೋ ಭದ್ರಾವತಿಯ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಿದ ಬಳಿಕ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಡಲಾಗಿದೆ ಎಂದು ತಿಳಿದುಬಂದಿದೆ. ವಿವಿಪ್ಯಾಟ್ ನಲ್ಲಿ ಯಾರಿಗೆ ವೋಟು ಹಾಕಲಾಗಿದೆ ಎಂಬುದನ್ನು ವೀಡಿಯೋ ಮಾಡಿಕೊಳ್ಳಲಾಗಿದೆ. ಅಲ್ಲದೇ ಇವಿಎಂ ಮೆಷಿನ್ ನಲ್ಲಿ ಬಟನ್ ಒತ್ತಿ ಬಳಿಕ ರೆಡ್ ಲೈಟ್ ಕೂಡ ಆನ್ ಆಗೋದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದರಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳ ಭಾವಚಿತ್ರವಿದೆ.
ಇನ್ನೊಂದು ವಿಡಿಯೋ ಕೂಡ ವೈರಲ್ ಆಗುತ್ತಿದ್ದು ವೀಡಿಯೋದಲ್ಲಿ ಯಾರೋ ಒಬ್ಬ ಅಭ್ಯರ್ಥಿಗೆ ವೋಟ್ ಹಾಕುವಂತೆ ಕೈಯನ್ನು ತೆಗೆದುಕೊಂಡು ಹೋಗಿ, ಆನಂತ್ರ ಅಸಭ್ಯವಾಗಿ ಬೆರಳು ತೋರಿಸಿ ಮತ್ತೊಬ್ಬ ಅಭ್ಯರ್ಥಿಗೆ ವೋಟ್ ಹಾಕೋ ದೃಶ್ಯವನ್ನು ಕಾಣಬಹುದಾಗಿದೆ. ಈ ಬಗ್ಗೆ ಚುನಾವಣಾ ಆಯೋಗವು ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply