ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ದುರ್ಗಿಗುಡಿ ಮತ ಕೇಂದ್ರದ ಬಳಿ ಸರ್ವ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ, ಮತಚಲಾವಣೆಗೆ ಹೆಚ್ಚುವರಿ ಕಾಲವಕಾಶ ನೀಡಬೇಕೆಂದು ಮತಗಟ್ಟೆಯ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ
ಪ್ರತಿಭಟನೆಗೆ ಕಾರಣವೇನು ?
ದುರ್ಗಿಗುಡಿ ಶಾಲಾ ಮತ ಕೇಂದ್ರದಲ್ಲಿ ಮತ ಯಂತ್ರದ ತಾಂತ್ರಿಕ ದೋಷದ ಕಾರಣ ಅರ್ಧ ಗಂಟೆ ತಡವಾಗಿ ಮತದಾನ ಪ್ರಾರಂಭವಾಗಿತ್ತು, ಬೆಳಗ್ಗೆ 07 ಗಂಟೆಗೆ ಶುರುವಾಗಬೇಕಿದ್ದ ಮತದಾನ 7:30 ಕ್ಕೆ ಶುರುವಾಗಿತ್ತು. ಮತದಾನ ಮಾಡಲು ಹೆಚ್ಚುವರಿ ಅರ್ಧ ಗಂಟೆಗಳ ಕಾಲಾವಕಾಶ ನೀಡುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು, ಸಂಜೆ 6 ಗಂಟೆಗೆ ಶಾಲಾ ಗೇಟ್ ಅನ್ನು ಮುಚ್ಚಿ ಮತದಾನ ಮುಕ್ತಾಯವೆಂದು ಹೇಳಿದ್ದಾರೆ.
ಈ ಕಾರಣದಿಂದಾಗಿ ಸರ್ವಪಕ್ಷದ ಕಾರ್ಯಕರ್ತರು ಮತಗಟ್ಟೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ ಇದರಿಂದ ಹಲವರು ಮತದಾನದಿಂದ ವಂಚಿತವಾಗಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು. ದುರ್ಗಿಗುಡಿ ಶಾಲೆಯ ಮತ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಸಿದರು. ಮತದಾನಕ್ಕೆ ಬರುತ್ತಿದ್ದ ಮತದಾರರು ಹಾಗೂ ಪೊಲೀಸರ ಮಧ್ಯೆ ಜಟಾಪಟಿ ನಡೆದಿದೆ. ನಂತರ ಸ್ಥಳಕ್ಕೆ ಆಗಮಿಸಿದ ಚುನಾವಣಾ ಅಧಿಕಾರಿಗಳು ಅರ್ಧ ಗಂಟೆ ಹೆಚ್ಚುವರಿ ಕಾಲಾವಕಾಶವನ್ನು ಕೊಡುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನ ಕೈ ಬಿಡಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply