ಶಿವಮೊಗ್ಗ : ನಗರದಲ್ಲಿ ಮತದಾರರನ್ನು ಸೆಳೆಯಲು ಅರಮನೆಯಂತೆ ಮತಕೇಂದ್ರ ಸಿಂಗಾರಗೊಂಡಿದೆ , ಶಿವಮೊಗ್ಗದ ಜಿಲ್ಲಾ ಪಂಚಾಯತ್ ನ ಮತದಾನ ಕೇಂದ್ರದಲ್ಲಿ ವಿಭಿನ್ನ ಪ್ರಯತ್ನ ನಡೆದಿದೆ. ಮತದಾನಕ್ಕೆ ಬರುವವರಿಗೆ ಇಲ್ಲಿ ವಿಶೇಷ ವೆಲ್ ಕಂ ಮಾಡಲಾಗುತ್ತಿದೆ.
ಮತದಾರರೇ ಪ್ರಭುಗಳು ಎಂಬ ದ್ಯೇಯವಾಕ್ಯದಡಿಯಲ್ಲಿ ಈ ಮತಗಟ್ಟೆ ನಿರ್ಮಿಸಲಾಗಿದೆ. ಪ್ರಭು. ರಾಜ ಪೋಷಾಕಿನ ವೇಷದಲ್ಲಿ ಚುನಾವಣ ಅಧಿಕಾರಿಗಳು ಮಿಂಚುತ್ತಿದ್ದಾರೆ, ಇಬ್ಬರು ಪುರುಷ, ಮೂವರು ಮಹಿಳಾ ಸಿಬ್ಬಂದಿ ವಿಭಿನ್ನವಾಗಿ ರೆಡಿಯಾಗಿದ್ದಾರೆ.
ಅಲ್ಲದೆ ಮತ ಚಲಾಯಿಸಿ ಹೊರ ಬಂದವರು ಫೋಟೊ ಕ್ಲಿಕ್ಕಿಸಲು ಮತ್ತು ಮತದಾರರು ಕಿರೀಟತೊಟ್ಟು ಸಿಂಹಾಸನದಲ್ಲಿ ಕುಳಿತು ಫೋಟೋ ಕ್ಲಿಕ್ಕಿಸಲು ಫೋಟೊ ಜೋನ್ ಸ್ಥಾಪಿಸಲಾಗಿದೆ. ಮತದಾರರು ಸಿಂಹಾಸನದ ಮೇಲೆ ಕುಳಿತು ಕಿರೀಟ ಧರಿಸಿ, ಶಾಯಿ ಹಚ್ಚಿಸಿಕೊಂಡ ಬೆರಳು ತೋರಿಸಿ ಫೋಟೊಗೆ ಪೋಸ್ ನೀಡಬಹುದು. ಹಿಂಭಾಗದಲ್ಲಿ ರಾಜನ ಅಸ್ಥಾನ ಹೋಲುವ ಚಿತ್ರವಿದೆ. ಅದರ ಮೇಲೆ ಮತದಾರ ಪ್ರಭು ಎಂದು ಬರೆಯಲಾಗಿದೆ. ಬೆಳಗ್ಗೆಯಿಂದ ಇಲ್ಲಿ ಹಲವರು ಮತ ಚಲಾಯಿಸಿ, ಸಿಂಹಾಸನವೇರಿ ಖುಷಿ ಪಟ್ಟಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply