ಆನಂದಪುರ : ಆನಂದಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ಯಲ್ಲಿ ದಾಖಲೆಯ ಫಲಿತಾಂಶ ಕಂಡುಬಂದಿದೆ.
ಇದುವರೆಗೂ ಇತಿಹಾಸದಲ್ಲೇ ಕೆಪಿಎಸ್ ಶಾಲೆ 92 % ಬಂದಿರಲಿಲ್ಲ ಇದೇ ಮೊಟ್ಟಮೊದಲ ಬಾರಿಗೆ ಇಂತಹ ದಾಖಲೆ ಫಲಿತಾಂಶ ಕೆಪಿಎಸ್ ಶಾಲೆಯಲ್ಲಿ ಕಂಡುಬಂದಿದೆ
ಅತಿ ಶಿಸ್ತಿನಲ್ಲಿ ಎಸ್, ಎಸ್, ಎಲ್, ಸಿ ಪರೀಕ್ಷೆಯನ್ನು ನಡೆಸಿದ್ದು ಎಲ್ಲಾ ರೂಮುಗಳಲ್ಲೂ ಸಹ ಸಿಸಿ ಕ್ಯಾಮೆರಾ ವನ್ನು ಅಳವಡಿಸಲಾಗಿತ್ತು. ಹೀಗೆ ಶಿಸ್ತಿನಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು.
ಶಿಕ್ಷಕರು ಸಹ ಇಂತಹ ಫಲಿತಾಂಶ ಬರುವುದಕ್ಕೆ ಬಹಳಷ್ಟು ಶ್ರಮವಹಿಸಿದ್ದಾರೆ. ತರಗತಿಯ ಮುಂಚಿತವಾಗಿ, ಹಾಗೂ ರಜಾ ದಿನಗಳಲ್ಲಿ ಹೆಚ್ಚುವರಿ ಕ್ಲಾಸ್ ಗಳನ್ನು ಸಹ ಮಾಡಿರುತ್ತಾರೆ. ಇದರಿಂದ ಈ ಫಲಿತಾಂಶ ಬರುವುದಕ್ಕೇ ಕಾರಣಿಕೃತರಾಗಿದ್ದಾರೆ.
ವರದಿ : ಅಮಿತ್ ಆನಂದಪುರ
Leave a Reply