ಸಾಗರ :ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸೋಮಾರಿ ಗಳಾಗುತ್ತಿದ್ದಾರೆ. ಮನೆಯಲ್ಲಿ ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಮಾಡಲು ನಿರ್ಲಕ್ಷತನವನ್ನು ತೋರುತ್ತಾರೆ.
ಅದರಲ್ಲೂ ಫೋನ್ ಗಳನ್ನು ಹಿಡಿದು ಕೂತರೆ ಈ ಲೋಕದಿಂದ ಬೇರೆ ಇನ್ಯಾವುದೋ ಲೋಕಕ್ಕೆ ಹೋಗಿಬಿಡುತ್ತಾರೆ. ಇದರಿಂದ ಪೋಷಕರಿಗೆ ಚಿಂತೆ ಶುರುವಾಗಿದೆ.
ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ
ಆದರೆ ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಜೊತೆಗೆ ಅವರಿಗೆ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬಿಡುವಿನ ಅವಧಿಯಲ್ಲಿ, ಕಾಲೇಜಿನ ಆವರಣ ಸ್ವಚ್ಛ ಮಾಡುವುದು ಹಾಗೆ ಕಾಲೇಜಿನ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವುದು. ಮತ್ತು ಗಿಡಗಳನ್ನು ನೆಡುವುದು.
ಹೀಗೆ ಹಲವಾರು ಕಾರ್ಯಗಳಿಗೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಾ ಅವರಿಗೂ ಸಹ ಶಿಕ್ಷಣ ಜೊತೆ ಜೊತೆಗೆ ,ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರುಸುವಂತೆ ಮಾಡಲಾಗುತ್ತಿದೆ. ಇದರಿಂದ ಸೋಮಾರಿತನವನ್ನು ವಿದ್ಯಾರ್ಥಿಗಳಿಂದ ದೂರ ಮಾಡಲಾಗುತ್ತಿದೆ.
ಇವತ್ತಿನ ದಿನವು ಸಹ ವಿದ್ಯಾರ್ಥಿಗಳು ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಸುರೇಶ್ ಜಂಬಾನಿ , ಹಾಗೂ ಮಮತಾ ಹೆಗಡೆ ಮತ್ತು ದೈಹಿಕ ಶಿಕ್ಷಕರಾದ ಕೊಟ್ರೇಶ್ ಇವರ ನೇತೃತ್ವದಲ್ಲಿ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಓಡಾಡಲು ಹಾಗೂ ವಾಹನಗಳು ಹತ್ತಲು ಸ್ವಲ್ಪ ಅಡಚಣೆಯಾಗಿದ್ದು ಅದನ್ನು ಸಹ ಇವತ್ತು ಸರಿಪಡಿಸಲು ವಿದ್ಯಾರ್ಥಿಗಳು ಮುಂದಾದರು..
ಹೀಗೆ ಉತ್ತಮ ರೀತಿಯ ಶಿಕ್ಷಣದ ಜೊತೆ ಜೊತೆಗೆ ಕೆಲಸದ ಕಾರ್ಯಕ್ಷಮತೆಯನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುತ್ತಿದ್ದಾರೆ.
ವರದಿ : ಅಮಿತ್ ಆನಂದಪುರ
Leave a Reply