ಶಿವಮೊಗ್ಗದ ದುಮ್ಮಳ್ಳಿಯಲ್ಲಿ ಯುವಕನ ಬರ್ಬರ ಕೊಲೆ ! ಜಮೀನು ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ!

ಶಿವಮೊಗ್ಗ : ಶಿವಮೊಗ್ಗದ ದುಮ್ಮಳ್ಳಿ ಗ್ರಾಮದಲ್ಲಿ ಓರ್ವ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಜಮೀನು ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ ವಾಗಿದೆ

ಕೊಲೆಯಾದ ಸತೀಶ್ ದುಮ್ಮಳ್ಳಿಯಲ್ಲಿ ಜಮೀನು ಹೊಂದಿದ್ದು, ಪಕ್ಕದಲ್ಲಿ ಮಂಜನಾಯ್ಕ್ ಎನ್ನುವವರ ಜಮೀನು ಕೂಡ ಇದ್ದು, ಇಬ್ಬರ ಮಧ್ಯದಲ್ಲಿ ಜಮೀನು ವಿಚಾರವಾಗಿ ಗಲಾಟೆ ಇತ್ತು ಎನ್ನಲಾಗಿದೆ ಜಮೀನಿನ ವಿಚಾರದಲ್ಲಿ ವ್ಯಾಜ್ಯವಿತ್ತು. ಈ ವಿಚಾರ ಕೋರ್ಟ್‌ ಮೆಟ್ಟಿಲೇರಿದ್ದು, ವಿಚಾರಣೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿತ್ತು. ಕೋರ್ಟ್‌ನಲ್ಲಿ ಜಮೀನು ಶೇಷನಾಯ್ಕನ ಪರವಾಗಿ ಆಗುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

 ಮೃತ ಸತೀಶನ ತಂದೆ ಶೇಷನಾಯ್ಕ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಜಮೀನಿನ ವಿಚಾರವಾಗಿ ನಮಗೂ ಮತ್ತು ಮುಂಜಾನೆ ಎಂಬುವವರಿಗೂ ವಾಜ್ಯವಿತ್ತು, ಕೋರ್ಟ್ ಮೆಟ್ಟಿಲೇರಿದ ಕೇಸ್ ನಮ್ಮ ಪರವಾಗಿ ಸಾಧ್ಯತೆ ಇತ್ತು ಬೆಳಿಗ್ಗೆ ಸತೀಶ್ ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ದಾಳಿ ಮಾಡಿ ಕೊಲೆ ಮಾಡಲಾಗಿದೆ ಎಂದು  ಹೇಳಿದ್ದಾರೆ

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಎಸ್‌ಪಿ ಮಿಥುನ್‌ ಕುಮಾರ್‌ ಪ್ರಕರಣ ಸಂಬಂಧ ಅಖಿಲೇಶ್‌ ನಾಯ್ಕನನ್ನ ಬಂಧಿಸಲಾಗಿದೆ. ಸತೀಶ್‌ ನಾಯ್ಕ ತನ್ನ ಜಮೀನಿನಲ್ಲಿ ಕೆಲಸ ಮಾಡುವಾಗ ಜಮೀನು ವಿಚಾರಕ್ಕೆ ಗಲಾಟೆ ತೆಗೆದು ಅಖಿಲೇಶ್‌ ಹಾಗೂ ಆತನ ಕಡೆಯವರು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.