ಶಿವಮೊಗ್ಗ : ಒಂದು ಕಡೆ ಇಷ್ಟು ದಿನ ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದ್ದ ಜನತೆಗೆ ಮಳೆರಾಯ ತಂಪೆರ್ದಿದ್ದಾನೆ ಎಂದು ಖುಷಿ ಪಡುತ್ತಿದ್ದರೆ, ಇನ್ನೊಂದು ಕಡೆ ರೈಲಿನಲ್ಲಿ ಪ್ರಯಾಣಿಕರು ಮಳೆರಾಯನಿಗೆ ಹಿಡಿ ಶಾಪವನ್ನು ಹಾಕಿದ್ದಾರೆ, ಬೆಂಗಳೂರು-ಶಿವಮೊಗ್ಗ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಭೋಗಿಯ ಛಾವಣಿಯಿಂದ ಮಳೆ ಸುರಿದಿರುವ ಘಟನೆ ನಡೆದಿದೆ
ನಿನ್ನೆ ಅಂದರೆ ಶುಕ್ರವಾರ ಸಂಜೆ 5:15ಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ ರೈಲಿನ ಪ್ರಯಾಣಿಕರಿಗೆ ರೈಲಿನ ಒಳಗಡೆಯೇ ಮಳೆಯ ಅನುಭವವಾಗಿದೆ ಡಿ 10 ಭೋಗಿಯ ಹಲವು ಪ್ರಯಾಣಿಕರು ಮಳೆಯಿಂದ ಪರದಾಟ ಅನುಭವಿಸಿದ್ದಾರೆ
ರೈಲಿನ ಕಿಟಕಿ, ಬಾಗಿಲು ಮೂಲಕ ಮಳೆ ನೀರು ಬರುತ್ತಿದ್ದನ್ನು ನೋಡುತ್ತಿದ್ದ ಗ್ರಾಹಕರು ರೈಲಿನ ಛಾವಣಿಯಲ್ಲಿ ನೀರು ಸುರಿಯುತ್ತಿದ್ದನ್ನು ಕಂಡು ಹೌಹಾರಿದರು.
ಎರಡ್ಮೂರು ದಿನಗಳಿಂದ ಮಳೆಯಾಗುತ್ತಿದ್ದು ವಾತಾವರಣ ಹಿತವಾಗಿದೆ. ಆದರೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಪ್ರಯಾಣಿಕರಿಗೆ ಮಳೆ ಯಾಕಾದರೂ ಬರುತ್ತಿದೆಯೋ ಎಂದೆನಿಸಿತು. ಶತಾಬ್ದಿ ರೈಲಿನಲ್ಲಿ ಎಲ್ಲವೂ ಕಾಯ್ದರಿಸಿದ ಸೀಟುಗಳಾಗಿದ್ದ ಕಾರಣ ಬೇರೆ ಬೋಗಿಗೆ ಹೋಗಿ ಕೂರಲು ಸಹ ತೊಂದರೆಯಾಗಿತ್ತು. ರೈಲ್ವೆ ಇಲಾಖೆ ಕೂಡಲೇ ಈ ರೀತಿ ಇರುವುದನ್ನು ಸರಿಪಡಿಸಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply