ಶಿವಮೊಗ್ಗ : ಧಾರವಾಡದಿಂದ ಸಿಗಂದೂರಿಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರು ದರ್ಶನ ಪಡೆದು ವಾಪಸ್ ಮರಳುವ ಸಂದರ್ಭದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಿನ್ನೆ ಸಂಜೆ ಅಂಬರಗೊಂಡ್ಲು ಸಮೀಪ ನಡೆದಿದೆ
ಧಾರವಾಡದ ಕಲಘಟಕಿಯ ಮಂಜುಳಾ (38) ಮೃತ ದುರ್ದೈವೆ ಮಹಿಳೆ ಆಗಿದ್ದಾರೆ. ಕುಟುಂಬದೊಂದಿಗೆ ಸಿಗಂದೂರು ದೇವಿಯ ದರ್ಶನಕ್ಕೆ ಬಂದಿದ್ದ ಇವರು ಸಾಗರಕ್ಕೆ ಮರಳುವಾಗ ಬಸ್ ಹತ್ತುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಸಿಗಂದೂರು ಬಳಿಯ ಹೊಳೆಬಾಗಿಲಿನಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಬರುವ ಸಂದರ್ಭದಲ್ಲಿ ಬಸ್ ಹತ್ತಲು ನೂಕು ನುಗ್ಗಲು ಉಂಟಾಗಿದೆ, ಈ ಸಂದರ್ಭದಲ್ಲಿ ಬಸ್ ಬಂತು ಎಂದು ಮುನ್ನುಗ್ಗಿದ ಮಹಿಳೆ ಬಸ್ ನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ
ಸಾಗರ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು ಕೆಎಸ್ಆರ್ಟಿಸಿ ಶಿವಮೊಗ್ಗ ವಿಭಾಗದ ಸಂಚಾರಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ, ಇನ್ನು ಸರ್ಕಾರಿ ಬಸ್ ಠಾಣೆಯಲ್ಲಿ ನಿಲ್ಲಿಸಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply