ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಪುರದಾಳು ಗ್ರಾಮದ ಚಿತ್ರ ಶೆಟ್ಟಿ ಹಳ್ಳಿಯ ಬಳಿ ಕಾಡಾನೆ ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ
ಇತ್ತೀಚಿಗೆ ಮಲೆನಾಡು ಭಾಗಗಳಲ್ಲಿ ಪದೇ ಪದೇ ಆನೆಗಳು ಪ್ರತ್ಯಕ್ಷವಾಗುತ್ತಿರುವುದು ಮುಂದುವರೆದಿದೆ. ಇತ್ತೀಚಿಗಷ್ಟೇ ಶಿವಮೊಗ್ಗ ಗ್ರಾಮಾಂತರದ ಭಾಗದ ಚೋರಡಿ ಬಳಿ ಕಾಡಾನೆ ಬೆಳೆಗಳನ್ನು ನಾಶ ಮಾಡಿರುವ ಘಟನೆ ನಡೆದಿತ್ತು, ನಂತರ ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯಲ್ಲಿ ಆನೆ ಕಾಣಿಸಿಕೊಂಡಿತ್ತು, ಬಸವಪುರದಲ್ಲೂ ಕೂಡ ಆನೆ ಪ್ರತ್ಯಕ್ಷ ವಾಗಿರುವ ದೃಶ್ಯಗಳು ಲಭ್ಯವಾಗಿದ್ದವು ಈಗ ಚಿತ್ರ ಶೆಟ್ಟಿಹಳ್ಳಿ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ.ವಾಗಿದೆ.
ಚಿತ್ರ ಶೆಟ್ಟಿಹಳ್ಳಿ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿದ್ದು ಮಲೆನಾಡು ಭಾಗದಲ್ಲಿ ಪದೇ ಪದೇ ಆನೆಗಳು ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಹುಟ್ಟಿಸಿದೆ. ಕಳೆದ ಕೆಲವು ದಿನಗಳಿಂದ ಶೆಟ್ಟಿಹಳ್ಳಿ , ಪುರದಾಳು ಭಾಗದಲ್ಲಿ ಆನೆ ಕಾಣಿಸಿಕೊಳ್ಳುತ್ತಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ
ಪದೇ ಪದೇ ಆನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಹಲವು ದಿನಗಳಿಂದ ರಸ್ತೆ ಮಧ್ಯೆ ಬಂದು ಕಾಡಾನೆ ನಿಂತಿರುವ ದೃಶ್ಯಗಳು ಲಭ್ಯವಾಗಿದ್ದು ಅರಣ್ಯ ಇಲಾಖೆ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply