ಶಿವಮೊಗ್ಗ : ರೈಲು ಹರಿದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ವಿದ್ಯಾನಗರದ ಬಳಿ ನಡೆದಿದೆ.
ವಿದ್ಯಾನಗರದ ಬಳಿಯಿರುವ ರೈಲ್ವೆ ಹಳಿ ಪಕ್ಕದಲ್ಲಿ ಸೌದೆ ಆರಿಸುತ್ತಿದ್ದ ಕಾರ್ಮಿಕನೋರ್ವ ರೈಲು ಹರಿದು ಸಾವನ್ನಪ್ಪಿದ ಘಟನೆ ನಡೆದಿದೆ. ಈ ಕುರಿತು ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರುದ್ರಪ್ಪ (68) ಮೃತ ದುರ್ದೈವಿ. ಇತ ರೈಲ್ವೆ ಹಳಿ ಬಳಿ ಸೌದೆ ಆರಿಸುತ್ತಿದ್ದ ವೇಳೆ ಮೈಸೂರು ತಾಳಗುಪ್ಪ ರೈಲಿಗೆ ಸಿಲುಕಿ ಈ ಅವಘಡ ನಡೆದಿದೆ. ಇನ್ನು ರುದ್ರಪ್ಪ, ಸ್ವಲ್ಪ ಕಿವುಡು ಹಾಗೂ ಕಣ್ಣು ಮಂಜಿನಿಂದ ಬಳಲುತ್ತಿದ್ದನಂತೆ. ಹೀಗಾಗಿ ರೈಲು ಬಂದ ಶಬ್ದ ಕೇಳಿಸದೇ ದುರ್ಘಟನೆ ಸಂಭವಿಸಿದ್ದು, ಈ ಕುರಿತು ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply