ಶಿವಮೊಗ್ಗದಲ್ಲಿ ಅರಳಿದ ಕಮಲ..ಆನಂದಪುರದಲ್ಲಿ ಸಂಭ್ರಮದ ಆಚರಣೆ.

ಆನಂದಪುರ. : ಬಿ.ವೈ ರಾಘವೇಂದ್ರ ಅವರು ಗೆದ್ದಿರುವುದು ಬಹಳಷ್ಟು ಖುಷಿಯಾಗಿದೆ. ಈ ಗೆಲುವನ್ನು ಅವರು ಕಾರ್ಯಕರ್ತರಿಗೆ ಅರ್ಪಿಸಿದ್ದಾರೆ ಎಂದು ಮಾಜಿ ಸಚಿವರಾದ ಹರತಾಳು ಹಾಲಪ್ಪನವರು ಹೇಳಿದರು.

ಇಂದು ಆನಂದಪುರದಲ್ಲಿ ಬಿ ವೈ ರಾಘವೇಂದ್ರರವರ ಗೆಲುವಿನ ಸುದ್ದಿ ಮುಟ್ಟುತ್ತಿದ್ದಂತೆ ಸಂಭ್ರಮದಿಂದ ಸಿಡಿಮದ್ದುಗಳನ್ನು ಹಾರಿಸಿ ಸಿಹಿ ಹಂಚುವುದರ ಮೂಲಕ ಸಂಭ್ರಮಾಚರಣೆಯನ್ನು ಮಾಡಿದರು. ಇಂತಹ ಸಮಯದಲ್ಲಿ ಆಗಮಿಸಿದಂತಹ ಮಾಜಿ ಸಚಿವರಾದ ಹರತಾಳು ಹಾಲಪ್ಪ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ನಮ್ಮ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಇತಿಹಾಸದಲ್ಲಿ ದಾಖಲೆಯ ಮತಗಳ ಅಂತರದಲ್ಲಿ ಬಿ ವೈ ರಾಘವೇಂದ್ರ ಅವರು ಜಯಗಳಿಸಿದ್ದಾರೆ. ಸರಿಸುಮಾರು 25000 ಅಂತರದಲ್ಲಿ ಜಯವನ್ನು ಸಾಧಿಸಿದ್ದಾರೆ.

ಒಟ್ಟು 234000 ಮತಗಳಿಂದ ಅಂತರದಲ್ಲಿ ಗೆಲುವನ್ನು ಸಾಧಿಸಿದ್ದು ನಮಗೆಲ್ಲ ಸಂತೋಷದ ಸಂಗತಿಯಾಗಿದೆ. ಇಷ್ಟು ಅಂತರದಲ್ಲಿ ಗೆಲ್ಲಲು ಅದಕ್ಕೆ ನಮ್ಮ ಕಾರ್ಯಕರ್ತರೇ ಸಾಕ್ಷಿ, ಅವರು ಮನೆ ಮನೆಗೆ ಹೋಗಿ ನಮ್ಮ ಪಕ್ಷದ ಬಗ್ಗೆ ಮನಮುಟ್ಟುವಂತೆ ಜನಸಾಮಾನ್ಯರಿಗೆ ತಿಳಿಸಿದ್ದರಿಂದ ಈ ಗೆಲ್ಲವನ್ನು ಸಾಧಿಸಲಾಯಿತು ಎಂದು ಹೇಳಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ಹೊನಗೋಡು ಮಾತನಾಡುತ್ತಾ ಇದು ರಾಘವೇಂದ್ರರವರು ಮಾಡಿದ ಜನಸೇವೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಿಕ್ಕ ಉಡುಗೊರೆ. ಮುಂದಿನ ದಿನಗಳಲ್ಲಿ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಹುಮತ ಗಳಿಸಲು ಸಂಶಯವಿಲ್ಲ ಎಂದು ಹೇಳಿದರು.

ಈ ಸಂಭ್ರಮಾಚರಣೆಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಜನಸಾಮಾನ್ಯರು ಭಾಗಿಯಾಗಿದ್ದರು.

ವರದಿ : ಅಮಿತ್ ಆನಂದಪುರ 

ದೊಡ್ಮನೆ ಸೊಸೆ ಗೀತಾ ಶಿವರಾಜಕುಮಾರ್ ಗೆ ಸತತ ಹಿನ್ನಡೆ !


Leave a Reply

Your email address will not be published.