ಸಾಗರ : ತಾಲೂಕಿನ ಉಳ್ಳೂರು ಸಮೀಪದ ಮಂಚಾಲೆ ಬಳಿ ಓಮ್ಮಿ ಹಾಗೂ ಇಂಡಿಕಾ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ನಡೆದಿದೆ.
ಅಪಘಾತದಲ್ಲಿ ಭದ್ರಾವತಿ ಗ್ರಾಮದ ಅಜಯ್ (21) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಾಗರದ ಟೌನ್ ನಿವಾಸಿಯಾದ ಸೈಯದ್ ನೂರುಲ್ಲಾ ಉಳ್ಳೂರು ಗ್ರಾಮದಲ್ಲಿ ಮೊಟ್ಟೆ ಕೊಟ್ಟು ಬರುತ್ತಿದ್ದ ವೇಳೆ ಓಮಿನಿ ಡಿಕ್ಕಿಯಾಗಿದೆ, ಡಿಕ್ಕಿಯ ರಭಸಕ್ಕೆ ಓಮಿನಿಯಲ್ಲಿದ್ದ ಅಜಯ್ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇಂಡಿಕಾ ಕಾರ್ ನಲ್ಲಿದ್ದ ಸೈಯದ್ ನೂರುಲ್ಲಾ ರವರಿಗೂ ತೀವ್ರ ಪೆಟ್ಟಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಓಮ್ಮಿಯಲ್ಲಿದ್ದ ಭದ್ರಾವತಿ ಗ್ರಾಮದ ಉಲ್ಲಾಸ್ ಗೂ ಕೂಡ ತೀವ್ರ ಪ್ರಮಾಣದ ಗಾಯಗಳಾಗಿದ್ದು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆನಂದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Reply