ಶಿವಮೊಗ್ಗ : ಹಣಗೆರೆಕಟ್ಟೆ ಆಯನೂರು ರಸ್ತೆಯಲ್ಲಿ ಬ್ರಿಜಾ ಕಾರಿಗೆ ಜಿಂಕೆಯೊಂದು ಅಡ್ಡ ಬಂದಿದೆ, ಡಿಕ್ಕಿಯಾದ ರಭಸಕ್ಕೆ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ
ಶಿವಮೊಗ್ಗದ ಹಣಗರ ಕಟ್ಟೆಯಿಂದ ಆಯನೂರು ಕಡೆಗೆ ಹೋಗುತ್ತಿದ್ದಾಗ ಅರೇಹಳ್ಳಿಯ ಬಳಿ ಜಿಂಕೆಯೊಂದು ಬ್ರೀಜಾ ಕಾರಿಗೆ ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ.ನಿನ್ನೆ ಸಂಜೆ ಈ ಘಟನೆ ಸಂಭವಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆ ಕಳೆಬರಹವನ್ನು ವಿಲೇವಾರಿ ಮಾಡಿದೆ.
ನಿನ್ನೆ ಸಂಜೆ ಹಣಗರೆಕಟ್ಟೆಯ ಕಡೆಯಿಂದ ಬ್ರೀಜಾ ಕಾರಿಗೆ ಜಿಂಕೆಯೊಂದು ಅಡ್ಡಬಂದಿದೆ. ರೋಡ್ ಕ್ರಾಸ್ ಮಾಡುತ್ತಿದ್ದ ಜಿಂಕೆ ಸಡನ್ ಆಗಿ ಬಂದಿದ್ದರಿಂದ ಕಾರು ಜಿಂಕೆಗೆ ಡಿಕ್ಕಿಯಾಗಿದೆ. ಪರಿಣಾಮ ಜಿಂಕೆ ರಸ್ತೆಯ ಬದಿಗೆ ಹಾರಿ ಬಿದ್ದಿದ್ದು ಅಲ್ಲಿಯೇ ಜೀವಬಿಟ್ಟಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply