ಶಿವಮೊಗ್ಗ : ನಗರದ ವಿನೋಬನಗರದ ವಾಸದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತಿದ್ದ ಆರೋಪದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ
ವಿನೋಬನಗರ ಪೋಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಐ.ಪಿ.ಎಸ್ ಹಾಗು ಪೋಲೀಸ್ ಅಧಿಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ವಿನೋಬಾನಗರ ಪೋಲೀಸ್ ಠಾಣೆಯ ಪಿಐ ಶ್ರೀಮತಿ ಚಂದ್ರಕಲಾರವರ ನೇತೃತ್ವದಲ್ಲಿ ಸಿಬ್ಬಂದಿಗಳೊಡನೆ ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆ ಮೇಲೆ ದಾಳಿ ನಡೆಸಿ ಸಂತ್ರಸ್ಥೆ ಮಹಿಳೆಯೊಬ್ಬರನ್ನು ರಕ್ಷಣೆ ಮಾಡಿದ್ದಾರೆ.
ಶೇಖರ್ ಮೂರ್ತಿ, 45 ವರ್ಷ, ಹೊಸಮನೆ, ಶಿವಮೊಗ್ಗ ಟೌನ್ ಈತನನ್ನು ದಸ್ತಗಿರಿ ಮಾಡಿ ಆರೋಪಿಯ ವಿರುದ್ಧ IMMORAL TRAFFIC PREVENTION ACT ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Leave a Reply