ಶಿವಮೊಗ್ಗ : ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಮನೆ ಮೂರನೇ ತಿರುವಿನಲ್ಲಿ ಮೇ 30ರ ರಾತ್ರಿ ನಡೆದ ಬರ್ತಡೇ ಪಾರ್ಟಿಯ ನಶೆಯಲ್ಲಿದ್ದ ಗ್ಯಾಂಗ್ ಒಂದು ಮನೆಗಳ ಮುಂದೆ ನಿಲ್ಲಿಸಿದ್ದ ಸ್ಥಳೀಯರ ಕಾರ್ ಬೈಕ್ ಆಟೋಗಳನ್ನು ಲಾಂಗು ಮಚ್ಚುಗಳಿಂದ ಹೊಡೆದು ಜಖಂಗೊಳಿಸಿ ತಲೆಮರಿಸಿಕೊಂಡಿದ್ದರು, ವಾಹನಗಳನ್ನು ದ್ವಂಸಗೊಳಿಸಿದ್ದ ದುಷ್ಕರ್ಮಿಗಳನ್ನು ಪೊಲೀಸರು ಅರೆಸ್ಟ್ ಮಾಡಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ
ದಿನಾಂಕ: 30-05-2024 ರಂದು ರಾತ್ರಿ ದುಷ್ಕರ್ಮಿಗಳು ಶಿವಮೊಗ್ಗ ನಗರದ ಹೊಸಮನೆ 3ನೇ ಕ್ರಾಸ್‌ನಲ್ಲಿ, ಸಾರ್ವಜನಿಕರು ಮನೆಯ ಮುಂಭಾಗ ನಿಲ್ಲಿಸಿದ್ದ ವಾಹನಗಳ ಗ್ಯಾಸ್ ಗಳನ್ನು ಒಡೆದು ಜಖಂ ಗೊಳಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ PREVENTION OF DESTRUCTION AND LOSS OF PROPERTY ACT, ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತಾರೆ.
ಆರೋಪಿತರ ಪತ್ತೆಗಾಗಿ ಶಿವಮೊಗ್ಗ ಜಿಲ್ಲಾ ರಕ್ಷಣಾ ಅಧಿಕಾರಿ ಮಿಥುನ್ ಕುಮಾರ್ ಜಿ.ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ -1ಅನಿಲ್ ಕುಮಾರ್ ಭೂಮಾರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು- 2 ಕಾರಿಯಪ್ಪ ಎ.ಜಿ, ಇವರ ಮಾರ್ಗದರ್ಶನದಲ್ಲಿ ಬಾಬು ಆಂಜನಪ್ಪ, ಡಿವೈಎಸ್ ಪಿ ಶಿವಮೊಗ್ಗ ಎ ಉಪ ವಿಭಾಗ ಮತ್ತು ಸುರೇಶ್ ಡಿವೈಎಸ್ಪಿ ಶಿವಮೊಗ್ಗ, ಬಿ ಉಪ ವಿಭಾಗ ರವರ ಮೇಲ್ವಿಚಾರಣೆಯಲಿ ಮತ್ತು ರವಿ ಪಾಟೀಲ್ ಪಿಐ ದೊಡ್ಡಪೇಟೆ ಪೊಲೀಸ್ ಠಾಣೆ ರವರ ನೇತೃತ್ವದ ತನಿಖಾ ತಂಡವನ್ನು ರಚಿಸಲಾಗಿತ್ತ್ತು
ಸದರಿ ತನಿಖಾ ತಂಡವು ದಿನಾಂಕಃ 09-06-2024 ಪ್ರಕರಣದ ಆರೋಪಿತರಾದ
1. ನೀರಜ್ ಬಿ @ ಬಿಕ್ಲಾ, 21 ವರ್ಷ, ಹೊಸಮನೆ ಸುಬ್ಬಯ್ಯ ಆಸ್ಪತ್ರೆ ಪಕ್ಕ ಶಿವಮೊಗ್ಗ ನಗರ.
2. ಮಣಿಕಂಠ ಎಸ್ @ ಮಾರ್ವಾಡಿ ಮಣಿ, 20 ವರ್ಷ, ಕಾಮಾಕ್ಷಿ ಬೀದಿ ಶಿವಮೊಗ್ಗ ನಗರ.
3. ದರ್ಶನ್ ಎಸ್ @ ದಾಸ, 20 ವರ್ಷ, ಕಾಮಾಕ್ಷಿ ಬೀದಿ ಶಿವಮೊಗ್ಗ, ನಗರ.
4. ಗಗನ್ ಇ @ ಕಪಾಲಿ ಬಿನ್ ಈಶ್ವರ 19 ವರ್ಷ, ಹೊಸಮನೆ ಶಿವಮೊಗ್ಗ ನಗರ.
5. ರಾಕೇಶ್ @ ಅಪ್ಪು, 20 ವರ್ಷ, ಜಟ್ ಪಟ್ ನಗರ ವಿನೋಬನಗರ ಶಿವಮೊಗ್ಗ.
6. ನಿವಾಸ @ ಏಪ್ರಿಲಾ ಸೀನಾ, 24 ವರ್ಷ, ಮೇದಾರ ಕೇರಿ ವಿನೋಬಗರ ಶಿವಮೊಗ್ಗ
ಈ ಆರೋಪಿಗಳನ್ನು ದಸ್ತಗಿರಿ ಮಾಡಿ, ಆರೋಪಿತರನ್ನು ವಿಚಾರಣೆ ಮಾಡಲಾಗಿ, ಸದರಿಯವರು ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ವಾಹನಗಳ ಗ್ಲಾಸ್ ಗಳನ್ನು ಜಖಂ ಗೊಳಿಸಿರುವುದು ತಿಳಿದು ಬಂದಿರುತ್ತದೆ. ಸದರಿ ಆರೋಪಿತರನ್ನು ಘನ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ, ಆರೋಪಿತರ ಪತ್ತೆ ಕಾರ್ಯದಲ್ಲಿ ಭಾಗಿಯಾದ ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧಿಕ್ಷಕರು ಶಿವಮೊಗ್ಗ,, ಜಿಲ್ಲೆ, ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ,
ವರದಿ : ಲಿಂಗರಾಜ್ ಗಾಡಿಕೊಪ್ಪ
ಇದನ್ನೂ ಓದಿ : ವಿನೋಬನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ ಮನೆ ಮೇಲೆ ಪೊಲೀಸರ ರೈಡ್ ! ಓರ್ವ ಮಹಿಳೆಯ ರಕ್ಷಣೆ !
Leave a Reply