ದೊಡ್ಮನೆ ಕುಟುಂಬದಲ್ಲಿ ಮೊದಲ ಡಿವೋರ್ಸ್  : ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಯುವರಾಜ್ ಕುಮಾರ್ !

ಬೆಂಗಳೂರು : ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ಎಂದು ಹೆಸರುವಾಸಿಯಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತ ವಿಚ್ಛೇಧನ ಪ್ರಕರಣದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ವಿಚ್ಛೇಧನ ಪ್ರಕರಣ ಬೆಳಕಿಗೆ ಬಂದಿದೆ. ಸ್ಯಾಂಡಲ್‌ವುಡ್ ನ ದೊಡ್ಡನೆ ಎಂದು ಕೆರಸಿಕೊಳ್ಳುವ ಡಾ.ರಾಜ್ ಕುಮಾರ್‌ರ ಕುಟುಂಬದಲ್ಲಿ ಈಗ ಮೊದಲ ಡಿವೋರ್ಸ್ ಕೇಸ್ ದಾಖಲಾಗಿದೆ.

ಸ್ಯಾಂಡಲ್‌ವುಡ್ ನ ದೊಡ್ಡ್ಮನೆ ಎಂದು ಕೆರಸಿಕೊಳ್ಳುವ ಡಾ.ರಾಜ್ ಕುಮಾರ್‌ರ ಕುಟುಂಬದಲ್ಲಿ ಈಗ ಮೊದಲ ಡಿವೋರ್ಸ್ ಕೇಸ್ ದಾಖಲಾಗಿದೆ.ಯುವ ಸಿನಿಮಾದ ಮೂಲಕ ಸ್ಯಾಂಟಲ್‌ವುಡ್ ಗೆ ಭರ್ಜರಿ ಎಂಟ್ರಿ ಕೊಟ್ಟು ಮೊದಲ ಸಿನಿಮಾದಲ್ಲೇ ಯಶಸ್ಸು ಕಂಡಿರುವ ಯುವ ರಾಜ್‌ಕುಮಾರ್ ವೈಯಕ್ತಿಕ ಬಾಳಲ್ಲಿ ಬಿರುಗಾಳಿ ಎದ್ದಿದೆ. ಕಳೆದ 6ನೇ ತಾರೀಕು ಫ್ಯಾಮಿಲಿ ಕೋರ್ಟ್‌ನಲ್ಲಿ ಯುವ ರಾಜ್‌ಕುಮಾರ್ ಅರ್ಜಿ ಸಲ್ಲಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಎಂಸಿ ಆಯಕ್ಟ್ ಸೆಕ್ಷನ್ 13(1)(ia) ಅಡಿಯಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಯುವ ಪತ್ನಿ ಶ್ರೀದೇವಿ ಭೈರಪ್ಪಗೆ ಕೋರ್ಟ್‌ನಿಂದ ಈಗಾಗಲೇ ನೋಟಿಸ್ ಕೂಡ ಜಾರಿಯಾಗಿದೆ. ಯುವ ತಮ್ಮ ಪತ್ನಿಯ ವಿರುದ್ಧ ಕ್ರೌರ್ಯ, ಅಗೌರವದಿಂದ ನೋಡಿಕೊಂಡ ಆರೋಪ ಮಾಡಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಂದ್ರೆ ತಮಗೆ ಮಾನಸಿಕ ಟಾರ್ಚರ್ ನೀಡಲಾಗಿದೆ ಎಂಬ ಆರೋಪ ಮಾಡಿ ಯುವ ಕೇಸ್ ದಾಖಲಿಸಿದ್ದಾರೆ.

ಈ ಕಳೆದ ಆರೇಳು ತಿಂಗಳಿಂದ ಯುವ-ಶ್ರೀದೇವಿ ದೂರ ದೂರವೇ ಉಳಿದಿದ್ದಾರೆ ಎಂಬುದೂ ತಿಳಿದುಬಂದಿದ್ದು, ದೊಡ್ಡನೆಯಿಂದ ಈಗಾಗ್ಲೆ ಶ್ರೀದೇವಿ ಭೈರಪ್ಪ ಅಂತರ ಕಾಯ್ದುಕೊಂಡಿದ್ದಾರೆ. ಈ ಹಿಂದೆ ದೊಡ್ಡನೆ ಪ್ರತಿ ಕಾರ್ಯಕ್ರಮದಲ್ಲಿ ಇರ್ತಿದ್ದ ಶ್ರೀದೇವಿ, ಹಲವು ತಿಂಗಳಿಂದ ಯುವ ಜೊತೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಯುವ ಸಿನಿಮಾ ಮಹೂರ್ತಕ್ಕೆ ಇದ್ದರೂ ರಿಲೀಸ್ ವೇಳೆ ಕೂಡ ಶ್ರೀದೇವಿ ಆಗಮಿಸಿರಲಿಲ್ಲ. ಸದ್ಯ ಈ ಪ್ರಕರಣದ ಬಗ್ಗೆ ಜುಲೈ ತಿಂಗಳ 4ನೇ ತಾರೀಕಿಗೆ ಕೋರ್ಟ್ ವಿಚಾರಣೆ ನಿಗದಿ ಮಾಡಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ


Leave a Reply

Your email address will not be published.