ಶಿವಮೊಗ್ಗ  : ಫೇಸ್ಬುಕ್ ಲವ್ ! 26 ರ ಯುವಕನ ಜೊತೆ 48ರ ಆಂಟಿಯ ಪ್ರೀತಿ ! ಲವ್ ನಂಬಿದವಳು ಕೊಲೆಯಾಗಿ ಹೋದಳು ! ಮರ್ಡರ್ ಮಿಸ್ಟ್ರಿಯನ್ನು ಪೊಲೀಸರು ಭೇದಿಸಿದ್ದು ಹೇಗೆ ?

ಶಿವಮೊಗ್ಗ : ಒಂದು ಚಂದದ ಮುಖ, ಒಂದಿಷ್ಟು ಲೈಕ್ಸ್‌ಗಳಿಂದ ಶುರುವಾಗಿ ಇನ್‌ಬಾಕ್ಸ್‌ ನಲ್ಲಿ ಪರಿಚಯವಾಗಿ ಪರಸ್ಪರ ವಾಟ್ಸ್‌ಆ್ಯಪ್‌ ತನಕ ಹೋಗುವ ವೇಳೆಗೆ ಇಬ್ಬರ ನಡುವೆ ಒಂದು ಖಾಸಗಿ ಬಂಧ ಬೆಳೆಯುತ್ತದೆ. ನಮಗೆ ಅರಿವಿಲ್ಲದೆಯೇ ಫೇಸ್‌ಬುಕ್ನಲ್ಲಿ ತಮ್ಮತನದ ಹೆಚ್ಚುಗಾರಿಕೆಯನ್ನು ತೋರಿಸಿಕೊಳ್ಳಲು ಹೋಗುತ್ತೇವೆ. ಚಂದ ಚಂದದ ಫೋಟೋಗಳನ್ನು ಹರಿಬಿಡುತ್ತೇವೆ. ಅದಕ್ಕೊಂದಿಷ್ಟು ಲೈಕ್‌, ಕಾಮೆಂಟ್‌ಗಳನ್ನು ನಿರೀಕ್ಷಿಸುತ್ತೇವೆ. ಒಂದಿಷ್ಟು ಜನ ಇದಕ್ಕಂತಲೇ ಕಾದು ಕೂತಿರುತ್ತಾರೆ. ಕಾಮೆಂಟ್‌ಗಳಲ್ಲಿ ಒಂದಿಷ್ಟು ಮೋಡಿ ಮಾಡಿ ಬಿಡುತ್ತಾರೆ. ಚಂದದ ಹುಡುಗ ಅಥವಾ ಹುಡುಗಿಯರ ಹಿಂದೆ ಬಿದ್ದು ಬಿಡುತ್ತಾರೆ. ಮೊದಲ ವಾರ ಅವಳ ಅಥವಾ ಅವನ ಪೋಸ್ಟ್‌ಗಳಿಗೆ ಸದಾ ಹೊಗಳಿಕೆಯನ್ನು ಹರಿಯಬಿಡುತ್ತಾರೆ. ಆಮೇಲೆ ಮಸೆಂಜರ್‌ನಲ್ಲಿ ಹಾಯ್‌ ಎಂದು ಇಣಕಿ ಬಿಡುತ್ತಾರೆ. ಒಂದು ರಿಪ್ಲೆ ಬಂದು ಬಿಡ್ತು ಅಂದ್ರೆ ಸಾಕು ಇನ್‌ಬಾಕ್ಸ್‌ಗೆ ಬಂದು ಕೂತು ಬಿಡುತ್ತಾರೆ. ಅಮೇಲೆ ಮಾತಿಗೆ ಮಾತು, ಮಾತಿನಲ್ಲಿ ಮನೆ ಕಟ್ಟುತ್ತಾರೆ, ಫೋನ್‌ ನಂಬರ್‌ ಹಸ್ತಾಂತರ. ದಿಢೀರನೆ ವಾಟ್ಸಪ್‌ನಲ್ಲಿ ಚಾಟ್‌ಗೆ ಇಳಿಯುತ್ತಾರೆ. ಮಾತು ಜೋರು, ಹರಟೆಯ ಭರಾಟೆ. ಇಬ್ಬರೂ ಮನಸ್ಸಿಗೆ ತುಂಬಾ ಹತ್ತಿರಾದೆವು ಅಂದುಕೊಳ್ಳುತ್ತಾರೆ. ಅವನೋ ಅಥವಾ ಅವಳೋ ಪ್ರೀತಿಯ ಫೈಲ್‌ವೊಂದನ್ನು ಮುಂದಿಡುತ್ತಾರೆ. ಹೀಗೆ ಪ್ರೀತಿ ನೆತ್ತಿಗೇರಿ ಇಳಿಯುವ ಮೊದಲೇ ಎಂತೆಂಥ ಎಡವಟ್ಟುಗಳಾಗಿ ಬಿಡುತ್ತವೆ. ಸಾವು ಕೂಡ ಆಗಿಬಿಡುತ್ತದೆ, ಇಂಥದ್ದೊಂದು ಘಟನೆ ಇಲ್ಲಿದೆ ನೋಡಿ.

 ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುವ ಪ್ರೀತಿ ಬಹಳ ದಿನಗಳ ಕಾಲ ಅಥವಾ ಗಟ್ಟಿಯಾಗಿರುವುದಿಲ್ಲ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಇಷ್ಟಾದರೂ ಅನೇಕರು ಪ್ರೀತಿಗೆ ಬಿದ್ದು ಬಲಿಯಾಗುತ್ತಾರೆ. ಇದೀಗ ಅಂತಹದ್ದೇ ಒಂದು ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿವಮೊಗ್ಗದ ವಿಧವೆ ಮಹಿಳೆ ಮತ್ತು ವಿಜಯಪುರದ ಯುವಕ ಇಬ್ಬರು ಫೇಸ್‌ಬುಕ್​​ನಲ್ಲಿ ಲವ್ (Love) ಮಾಡಿದ್ದು ಬಳಿಕ ಕೊಲೆಯಲ್ಲಿ ಅಂತ್ಯವಾಗಿದೆ.ರೇವಣಸಿದ್ದಯ್ಯ (26) ಕೊಲೆ‌ ಮಾಡಿದ ಯುವಕ. ಮಮತಾ (48) ಕೊಲೆಯಾದ ಮಹಿಳೆ.

ಫೇಸ್ ಬುಕ್ ನಲ್ಲಿ ಆರಂಭವಾದ ಮಹಿಳೆ ಹಾಗೂ ಯುವಕನ ನಡುವಿನ ಲವ್ ಸ್ಟೋರಿ ಕೃಷ್ಣಾನದಿ ದಡದಲ್ಲಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ

 ಶಿವಮೊಗ್ಗ ಮೂಲದ ಮಮತಾ ಎಂಬ ಮಹಿಳೆ ವಿಜಯಪುರ ಮೂಲದ ಯುವಕ ರೇವಣಸಿದ್ದಯ್ಯ ನ ನಡುವೆ ಫೇಸ್ಬುಕ್ ಮುಖಾಂತರ ಅದು ಹೇಗೋ ಪರಿಚಯವಾಗುತ್ತದೆ, ಮಮತಾ ತನ್ನ ಪತಿಯನ್ನು ಕಳೆದುಕೊಂಡಿದ್ದಾಳೆ, ಫೇಸ್ಬುಕ್ ಸಾಮಾಜಿಕ ಜಾಲತಾಣದ ಮುಖಾಂತರವಾಗಿ ಇಬ್ಬರೂ ಪರಸ್ಪರ ಪರಿಚಯವಾಗುತ್ತಾರೆ, ದಿನ ಕಳೆದಂತೆ ಪರಿಚಯ ಸ್ನೇಹವಾಗಿ ಸ್ನೇಹ ಪ್ರೀತಿಯಾಗಿ ಇಬ್ಬರ ನಡುವೆ ಸಲುಗೆ ಬೆಳೆಯುತ್ತದೆ, ಇಬ್ಬರ ನಡುವಿನ ಪ್ರೀತಿ ಪ್ರೇಮದ ಸಲುಗೆಯಿಂದ ಯುವಕ ರೇವಣ ಸಿದ್ದ ಶಿವಮೊಗ್ಗದ ಮಹಿಳೆ ಮಮತಾಳಿಂದ ಒಂದಿಷ್ಟು ಹಣವನ್ನ ಕೇಳಿದ್ದನಂತೆ, ಮಮತಾಳೂ ಕೂಡ ಆನ್ಲೈನ್ ಮುಖಾಂತರ ರೇವಣ ಸಿದ್ದನಿಗೆ ಹಣ ಕಳಿಸಿದಳು, ಕೆಲ ದಿನಗಳ ನಂತರ ಮಹಿಳೆ ರೇವಣಸಿದ್ದನ ಬಳಿ ಕೊಟ್ಟಿದ್ದ ಹಣವನ್ನು ವಾಪಸ್ ಕೇಳಿದ್ದಾಳೆ, ಆದರೆ ರೇವಣ ಸಿದ್ದ ಹಣ ವಾಪಸ್ ಕೊಡಲು ಹಿಂದೇಟು ಹಾಕುತ್ತಿದ್ದ, ಈ ಕಾರಣದಿಂದಾಗಿ ಯುವಕ ಮತ್ತು ಮಹಿಳೆಯ ನಡುವೆ ಮನಸ್ತಾಪ ಶುರುವಾಗಿತ್ತು, ಅಲ್ಲದೆ ಮಮತಾ ರೇವಣ ಸಿದ್ದನ ಬಳಿ ನನ್ನನ್ನ ಮದುವೆಯಾಗುವಂತೆ ಕೇಳಿದಳು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಮದುವೆಯ ಬಗ್ಗೆ ಮಾತನಾಡೋಣ ಬಾ, ಎಂದು ಮದುವೆಯ ಮಾತುಕತೆಯ ವಿಚಾರವಾಗಿ ರೇವಣ ಸಿದ್ದ ಶಿವಮೊಗ್ಗ ಮೂಲದ ಮಹಿಳೆ ಮಮತಾರನ್ನು ಪ್ಲಾನ್ ಮಾಡಿ ಮಮತಾಳನ್ನು ಬಬಲೇಶ್ವರಕ್ಕೀ ಕರೆಸಿಕೊಂಡಿದ್ದ. ನಂತರ ಜೂನ್ 2 ರಂದು ಬೀಳಗಿ ವ್ಯಾಪ್ತಿ ಕೃಷ್ಣಾ ನದಿ ಕಡೆ ಕರೆದುಕೊಂಡು ಹೋಗಿದ್ದು, ನದಿ ಬಳಿ ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಮಮತಾ ಕಾಣದಾದಾಗ ಶಿವಮೊಗ್ಗದಲ್ಲಿ ಕಾಣೆಯಾದ ದೂರು ದಾಖಲಾಗಿತ್ತು. ಇದೇ ಅವಧಿಯಲ್ಲಿ ಬೀಳಗಿ ಸಮೀಪದ ಕೃಷ್ಣಾ ನದಿ ಬಳಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿತ್ತು. ಗುರುತು ಪತ್ತೆ ವೇಳೆ ಶವ ಮಮತಾಳದ್ದು ಎಂದು ತಿಳಿದುಬಂದಿದೆ.

ತನ್ನ ಮನೆಯಿಂದ ಜೂನ್ 02 ರಂದು ಬಿಜಾಪುರಕ್ಕೆ ಹೋಗುತ್ತಿರುವುದಾಗಿ ತಂಗಿಯೊಂದಿಗೆ ಹೇಳಿ ಹೋದವರು ಮಮತಾ ವಾಪಾಸ್ ಆಗಿರಲಿಲ್ಲ. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು.‌ಲ ಈಕೆಯ ಫೋನ್ ಸ್ವಿಚ್‍ಆಪ್ ಆಗಿರುತ್ತದೆ. ನಾಪತ್ತೆಯಾಗಿದ್ದ ಮಹಿಳೆ ಕುರಿತು ಕೋಟೆ ಪಿಐ ಗುರುಬಸಪ್ಪನವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಈ ತಂಡ ಮಹಿಳೆಯ ಫೋನ್ ಲೊಕೇಷನ್ ನನ್ನ ಟ್ರ್ಯಾಕ್ ಮಾಡಿದ್ದಾರೆ.ಲೋಕೇಷನ್ ಬೀಳಗಿ ಬಳಿ ತೋರಿಸಿದೆ. ಕೊನೆಗೆ ಫೋನ್ ಟ್ರ್ಯಾಕ್ ಮಾಡಿದಾಗ ರೇವಣ ಸಿದ್ದಯ್ಯ (26) ವರ್ಷದ ಯುವಕನನ್ನ ತೋರಿಸಿದೆ. ಆಕೆಯ ಕೊನೆಯ ಫೋನ್ ಕಾಲು ಈತನಿಗೆ ಆದುದರಿಂದ ಪೊಲೀಸರು ಬೀಳಗಿಯಿಂದ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ಯಾವುದೇ ಕಾರಣಕ್ಕೂ ಪೊಲೀಸರ ಮುಂದೆ ಬಾಯಿ ಬಿಡದ ರೇವಣ ಸಿದ್ದಯ್ಯ ಕೋಟೆ ಪೊಲೀಸರ ಖಡಕ್ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾನೆ. ಬೀಳಗಿಯಲ್ಲಿ ಕೊಲೆ ಮಾಡಿ ಕೃಷ್ಣ ನದಿಗೆ ಬಿಸಾಕಿರುವುದಾಗಿ ಬಾಯಿ ಬಿಟ್ಟಿದ್ದಾನೆ.

ಮಮತಾಳ ಮೊಬೈಲ್ ಮೂಲಕ ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿ ರೇವಣಸಿದ್ದಯ್ಯನನ್ನು ಬಂಧಿಸಿದ್ದಾರೆ

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.