ಶಿವಮೊಗ್ಗ : ನಗರದ ಆಯನೂರು ಗೇಟ್ ಸಮೀಪ ಇರುವ ಸ್ಮಶಾನದಲ್ಲಿ ವ್ಯಕ್ತಿಯೋಬ್ಬನನ್ನ ಮಾರಕಾಸ್ತ್ರಗಳಿಂದ ಚುಚ್ಚಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನೆನ್ನೆ ರಾತ್ರಿ ನಡೆದಿದೆ.
ಆಯನೂರು ಗೇಟ್ ಸಮೀಪದ ಸ್ಮಶಾನದಲ್ಲಿ ಇಬ್ಬರು ಸ್ನೇಹಿತರು ಕುಡಿಯಲು ಬಂದಿದ್ದರು, ಕುಡಿಯಲು ಕರೆದು ಕುಡಿದ ನಶೆಯಲ್ಲಿ ಗಲಾಟೆ ತೆಗೆದು ಇಬ್ಬರೂ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ವಿಕ್ರಂ ಎನ್ನುವ ವ್ಯಕ್ತಿ ರಾಜುನಾಯ್ಕ್ ಅಲಿಯಾಸ್ ರಾಜು ಎಂಬ ಆತನನ್ನು ಮಾರಕಾಸ್ತ್ರಗಳಿಂದ ಚುಚ್ಚಿ ತಲೆ ಮೇಲೆ ಕಲ್ಲು ಎತ್ತು ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಹತ್ಯೆಯಾದ ವ್ಯಕ್ತಿಯನ್ನು ರಾಜು ನಾಯ್ಕ್ (30) ಎಂದು ಗುರುತಿಸಲಾಗಿದ್ದು, ಈತ ಜೆಪಿ ನಗರದ ನಿವಾಸಿಯಾಗಿದ್ದಾನೆ, ಕೊಲೆ ಮಾಡಿದವನನ್ನ ವಿಕ್ರಂ ಎಂದು ಗುರುತಿಸಲಾಗಿದ್ದು, ಇಬ್ಬರು ಸ್ನೇಹಿತರಾಗಿದ್ದರು, ಅವಾಗವಾಗ ಇಬ್ಬರೂ ಆಯನೂರು ಗೇಟ್ ಸಮೀಪದ ಸ್ಮಶಾನದಲ್ಲಿ ಕುಡಿಯಲು ಬರುತ್ತಿದ್ದರು, ನೆನ್ನೆಯು ಇಬ್ಬರೂ ಕುಡಿಯಲು ಬಂದಿದ್ದಾರೆ ಕಳೆದ ಮೂರು ನಾಲ್ಕು ದಿನಗಳಿಂದ ರಾಜು ವಿಕ್ರಮ್ ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನು, ಈ ಕಾರಣಕ್ಕೆ ವಿಕ್ರಂ ಕುಡಿದ ನಶೆಯಲ್ಲಿ ರಾಜು ಜೊತೆ ಜಗಳ ತೆಗೆದು ಮೊದಲು ಮಾರಕಾಸ್ತ್ರಗಳಿಂದ ಇರಿದಿದ್ದಾನೆ, ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ರಾಜು ಎಂಬುವನನ್ನು ಕೊಲೆ ಮಾಡಿದ್ದಾನೆ.
ಇನ್ನು ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ವಿಕ್ರಂ ನನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ, ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply