ಜಿಮ್ ನಲ್ಲಿ ರಶ್ಮಿಕಾ ಮಂದಣ್ಣ ಸಕ್ಕತ್ ವರ್ಕೌಟ್ ! ಜಿಮ್ ನಿಂದ ಹೊರ ಬಂದ ರಶ್ಮಿಕಾ ಸಖತ್ ಸ್ಮೈಲ್ !

ಸಿನಿಮಾ : ಕನ್ನಡ ಸಿನಿಮಾ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ ತನ್ನ ನಟನೆ ಮೂಲಕ ನ್ಯಾಶನಲ್ ಕ್ರಶ್ ಆಗಿ ಕ್ರೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ನಟಿ ಸೋಶಿಯಲ್ ಮೀಡಿಯಾದಲ್ಲಿ ಜಿಮ್ ಡ್ರೆಸ್ ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿ ರಶ್ಮಿಕಾ ಜಿಮ್ ನಲ್ಲಿ ಸಖತ್ ವರ್ಕೌಟ್ ಮಾಡಿದಂತೆ ಕಾಣ್ತಿದೆ. ನಟಿ ಜಿಮ್ ಶೂಟ್ ಬೆವರಿನಿಂದ ಒದ್ದೆ ಆಗಿದೆ. ಜಿಮ್ ನಿಂದ ಹೊರ ಬಂದ ರಶ್ಮಿಕಾ ಸಖತ್ ಸ್ಮೈಲ್ ಕೊಟ್ಟಿದ್ದಾರೆ. ನಟಿಯ ಸ್ಮೈಲ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಶ್ರೀವಲ್ಲಿ ನಗು ಬಲು ಚೆಂದ ಎಂದು ಅನೇಕರು ಕಮೆಂಟ್ ಮಾಡ್ತಿದ್ದಾರೆ. 

ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ, ಸಾನ್ವಿ ಜೋಸೆಫ್ ಪಾತ್ರದಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ಹೃದಯ ಕದ್ದಿದ್ರು. ಬಳಿಕ ಚಲೋ ಚಿತ್ರದ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟ ನಟಿ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ರಶ್ಮಿಕಾ ಸದ್ಯ ತೆಲುಗಿನಲ್ಲಿ ಅಲ್ಲು ಅರ್ಜುನ್ ಅವರ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.

ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಫ 2 ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ ಆಗಸ್ಟ್ 15ರ ಬದಲು ಪುಷ್ಪ 2 ಸಿನಿಮಾ ಡಿಸೆಂಬರ್ 6ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ. ಇತ್ತೀಚೆಗೆ ಹಿಂದಿಯಲ್ಲಿ ಪ್ಯಾನ್ ಇಂಡಿಯಾ ಫಿಲ್ಮ್ ಅನಿಮಲ್ ನಲ್ಲಿ ರಶ್ಮಿಕಾ ನಟಿಸಿದ್ರು. ಈ ಸಿನಿಮಾ ಮೂಲಕ ಮತ್ತೊಂದು ಬಿಗ್ ಹಿಟ್ ಅನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ.

ಕನ್ನಡದ ಈ ಚೆಲುವೆ ರಶ್ಮಿಕಾ ಇತ್ತೀಚೆಗೆ ಫೋರ್ಬ್ಸ್ ಇಂಡಿಯಾ ಅಂಡರ್ 30 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2024 ರ ಯಂಗ್ ಡಿಸ್ರಪ್ಟರ್ಸ್ ಮತ್ತು ಟ್ರೈಲ್ಬ್ಲೇಜರ್ಸ್ ವಿಭಾಗದಲ್ಲಿ ರಶ್ಮಿಕಾ ಸ್ಥಾನ ಪಡೆದಿದ್ದಾರೆ ಎಂದು ಫೋರ್ಬ್ಸ್ ಇಂಡಿಯಾ ಪ್ರಕಟಿಸಿತ್ತು.

ಟಾಲಿವುಡ್, ಕಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಕೈ ತುಂಬಾ ಸಿನಿಮಾಗಳಿವೆ. ಪುಷ್ಪಾ ದಿ ರೂಲ್ ಜೊತೆಗೆ ಲೇಡಿ ಸೆಂಟ್ರಿಕ್ ಸಿನಿಮಾ ರೇನ್ಬೋದಲ್ಲಿ ಶೂಟಿಂಗ್ ಕೆಲಸ ಕೂಡ ಮಾಡುತ್ತಿದ್ದಾರೆ. 

ಇತ್ತೀಚೆಗೆ ಹಿಂದಿಯಲ್ಲಿ ಪ್ಯಾನ್ ಇಂಡಿಯಾ ಫಿಲ್ಮ್ ಅನಿಮಲ್ ನಲ್ಲಿ ರಶ್ಮಿಕಾ ನಟಿಸಿದ್ರು. ಈ ಸಿನಿಮಾ ಮೂಲಕ ಮತ್ತೊಂದು ಬಿಗ್ ಹಿಟ್ ಅನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ನಟನೆಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಈ ವರ್ಷ ಕೂಡ ರಶ್ಮಿಕಾ ಬಿಗ್ ಹಿಟ್ ನೀಡುವ ನಿರೀಕ್ಷೆಯಲ್ಲಿದ್ದಾರೆ.

ಇನ್ನು ರಶ್ಮಿಕಾ ಮಂದಣ್ಣ ಸಿನಿಮಾಗಳ ವಿಚಾರವನ್ನು ನೋಡುವುದಾದ್ರೆ. ರಶ್ಮಿಕಾ ಅಭಿನಯದ ಪುಷ್ಪಾ 2: ದಿ ರೂಲ್ – ಡಿಸೆಂಬರ್​ನಲ್ಲಿ ಬಿಡುಗಡೆಯಾಗಲಿದೆ. ವಿಡಿ 12 – ವಿಜಯ್ ದೇವರಕೊಂಡ – ಗೌತಮ್ ತಿನ್ನನೂರಿ ಚಿತ್ರದಲ್ಲಿ ರಶ್ಮಿಕಾ ನಟಿಸಲಿದ್ದಾರೆ ಎನ್ನಲಾಗ್ತಿದೆ. ಡಿ 51 – ಧನುಷ್ ಮತ್ತು ಶೇಖರ್ ಕಮ್ಮುಲ ಚಿತ್ರದ ಶೂಟಿಂಗ್ ನಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ರವಿತೇಜ – ಗೋಪಿಚಂದ್ ಮಲಿನೇನಿ ಚಿತ್ರ ಜೊತೆಗೆ ರೈನ್ಬೋ – ಲೇಡಿ ಓರಿಯೆಂಟೆಡ್ ಸಿನಿಮಾಗಳ ಮೂಲಕ ರಶ್ಮಿಕಾ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ತಮಿಳಿನ ಸ್ಟಾರ್ ಹೀರೋ ವಿಕ್ರಮ್ ಜೊತೆಗೆ ರಶ್ಮಿಕಾ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ನಿರ್ದೇಶಕ ಜೂಡ್ ಆಂಥೋನಿ ಜೋಸೆಫ್ ನಿರ್ದೇಶನದಲ್ಲಿ ವಿಕ್ರಮ್ ಅದ್ಧೂರಿ ಸಿನಿಮಾ ಮಾಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದೆ. ರಶ್ಮಿಕಾ ಈಗಾಗಲೇ ತಮಿಳಿನಲ್ಲಿ ಕಾರ್ತಿ ಅವರ ‘ಸುಲ್ತಾನ್’ ಮತ್ತು ವಿಜಯ್ ಅವರ ‘ವಾರಿಸು’ ಚಿತ್ರಗಳಲ್ಲಿ ನಟಿಸಿದ್ದಾರೆ


Leave a Reply

Your email address will not be published.