ಶಿವಮೊಗ್ಗ ಪೊಲೀಸರಿಗೆ “ನೈಟ್ಸ್ ಇನ್ ಕಾಕಿಸ್” ಶಿರೋನಾಮೆಯಡಿ ಸನ್ಮಾನ !

ಶಿವಮೊಗ್ಗ : ಜಿಲ್ಲೆಯ ಸಾಧಕ ಪೊಲೀಸರಿಗೆ “ನೈಟ್ಸ್ ಇನ್ ಕಾಕಿಸ್” ಶಿರೋನಾಮೆಯಡಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ ರೌಂಡ್ ಟೇಬಲ್ 166ಮತ್ತು 266 ಹಾಗೂ ಮಲ್ನಾಡ್ ಮಾಸ್ಟರ್ 212 ಸಂಯುಕ್ತಾಶ್ರಯದೊಂದಿಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಜೂನ್ 22 ಶನಿವಾರ ಸಂಜೆ 5 ಗಂಟೆಗೆ “ನೈಟ್ಸ್ ಇನ್ ಕಾಕಿಸ್” ಶಿರೋನಾಮೆಯಡಿ ಜಿಲ್ಲೆಯ ಸಾಧಕ ಪೊಲೀಸರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಆಗಮಿಸಲಿದ್ದು, ರೌಂಡ್ ಟೇಬಲ್ ವಲಯ 13 ರ ಛೇರ್ಮನ್ ದೇವಾನಂದ್, ಕಾರ್ಯದರ್ಶಿ ಸುಶ್ರುತ್ ಹಾಜರಿರುವರು. ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಯೋಜಕರು ಕೋರಿದ್ದಾರೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.