ಸಾಗರ: ದಾನದಲ್ಲಿ ಶ್ರೇಷ್ಠ ದಾನ ರಕ್ತದಾನವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ರಕ್ತದಾನ ಮಾಡುವ ಮೂಲಕ ಬದುಕಿನ ಸಾರ್ಥಕತೆ ಮೆರೆಯಿರಿ ಎಂದು ಸಾಗರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಣ್ಣ ಹನುಮಂತಪ್ಪ .ಜಿ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾಗರದಲ್ಲಿ I Q A C, ಅಡಿಯಲ್ಲಿ ಯುವ ರೆಡ್ ಕ್ರಾಸ್ ಮತ್ತು ರೆಡ್ ರಿಬ್ಬನ್ ಘಟಕದ ವತಿಯಿಂದ ಎನ್.ಎಸ್.ಎಸ್.ಮತ್ತು ಎನ್.ಸಿ. ಸಿ. ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಹಾಗೂ ರೋಟರಿ ರಕ್ತ ನಿಧಿ ಘಟಕ , ಸಾಗರ ಉಪವಿಭಾಗೀಯ ಆಸ್ಪತ್ರೆ ಸಹಯೋಗದೊಂದಿಗೆ ನಡೆಸಲಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸಣ್ಣ ಹನುಮಂತಪ್ಪ .ಜಿ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು.
ಯುವತರುಣರೇ ತುಂಬಿರುವಂತಹ ಬಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು, ನಮ್ಮ ಒಂದೊಂದು ಹನಿರಕ್ತವು ಒಂದೊಂದು ಜೀವವನ್ನು ಬದುಕಿಸುತ್ತದೆ, ಇದರಿಂದ ಆರೋಗ್ಯವಂತ ಭಾರತ ನಿರ್ಮಾಣಮಾಡಲು ಸಹಾಯಕ ವಾಗುತ್ತದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ರಾಜನಂದನಿ ಕಾಗೋಡು ಮಾತನಾಡುತ್ತಾ ರಕ್ತ ಯಾವುದೇ ಅಂಗಡಿಗಳಲ್ಲಿ ಸಿಗುವಂತ ವಸ್ತುವಲ್ಲ, ಮನುಷ್ಯನ ದೇಹದಲ್ಲಿ ಉತ್ಪತ್ತಿಯಾಗುವ ವಸ್ತುವಾಗಿದೆ. ಇಂದಿನ ದಿನಗಳಲ್ಲಿ ರಕ್ತದ ಅಗತ್ಯತೆ ಹೆಚ್ಚಿದೆ ಈ ರೀತಿ ರಕ್ತದಾನ ಶಿಬಿರ ನಡೆಸುವುದು ಅವಶ್ಯಕ ಎಂದರು.
ಡಾ. ಸಚಿನ್ ರವರು ಮಾತನಾಡುತ್ತ ವಿದ್ಯಾರ್ಥಿಗಳು ರಕ್ತದಾನ ಮಾಡುವುದರಿಂದ ತಮ್ಮ ರಕ್ತದಲ್ಲಿ ಇತರ ಇತರ ಐದು ಕಾಯಿಲೆಯ ಲಕ್ಷಣಗಳನ್ನು ಪರೀಕ್ಷೆಗೆ ಒಳಪಡಿಸಿ ರಕ್ತದಾನಿಯ ಆರೋಗ್ಯ ಸ್ಥಿತಿಯನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ.ಉಮೇಶ ಎ.ಬಿ., ಪ್ರೊ.ರಾಜು, ಪ್ರೊ.ಸುರೇಶ ಜೆ.ಎಚ್.. ಶ್ರೀ ಗಣಪತಿ ಎಸ್.ಎಂ. ಶ್ರೀಮತಿ ಚಂದ್ರಕಲಾ ವಿ. ಭಾಗವಹಿಸಿದ್ದರು. ರೆಡ್ ಕ್ರಾಸ್ ಸಂಚಾಲಕರಾದ ಪ್ರೊ. ಮಂಜಪ್ಪ ಪಿ.ಎನ್. ಇವರು ಪ್ರಾಸ್ತಾವಿಕ ಮಾತನಾಡಿದರು.
ಕಾಲೇಜಿನ ವಿದ್ಯಾರ್ಥಿನಿಯರಾದ ಕುಮಾರಿ ಸುಪ್ರೀತಾ, ದೀಪಾ ಆರಂಭಗೀತೆ ಹಾಡಿದರು. ಅಂಕಿತ ಸ್ವಾಗತಿಸಿ, ಸೌಮ್ಯ ನಿರೂಪಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ವರದಿ : ಅಮಿತ್ ಆನಂದಪುರ
Leave a Reply