ಶಿವಮೊಗ್ಗ : ಸರ್ಕಾರಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಭದ್ರಾ ಜಲಾಶಯದಿಂದ ಸಾವಿರಾರು ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಹೌದು ಕರ್ನಾಟಕದಲ್ಲಿ ಮಲೆನಾಡು ಇನ್ನಿತರ ಕಡೆ ಭಾರೀ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗುತ್ತವೆ. ಮುಂದಿನ ಬೇಸಿಗೆವರೆಗೂ ನೀರು ಬೇಕಿರುವ ಕಾರಣ ಮಳೆ ನೀರನ್ನು ಸಂಗ್ರಹಿಟ್ಟುಕೊಳ್ಳಲಾಗುತ್ತಿದೆ. ಆದರೆ ಶಿವಮೊಗ್ಗ ಜಿಲ್ಲೆಯ ಈ ಭದ್ರಾ ಆಣೆಕಟ್ಟಿನ ನೀರು ಪೋಲಾಗುತ್ತಿದೆ.
ಭದ್ರಾ ಜಲಾಶಯದ ಸ್ಲೂಯಿಸ್ (ರಿವರ್) ಗೇಟ್ ನಿಂದ ಸಾವಿರಾರು ಕ್ಯೂಸೆಕ್ ನೀರು ಪೋಲಾಗುತ್ತಿರುವ ಪೋಟೋ-ವಿಡಿಯೋಗಳು ಹರಿದಾಡುತ್ತಿವೆ. ಮಳೆಗಾಲದಲ್ಲೂ ಸಹ ಅನಗತ್ಯವಾಗಿ ನದಿಗೆ ಈ ಆಣೆಕಟ್ಟಿನ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.
ನದಿಗೆ ನೀರು ಹರಿಸಲು ಎರಡು ಸ್ಲೂಯಿಸ್ ಗೇಟ್ ಅಥವಾ ರಿವರ್ ಗೇಟ್ ನಿರ್ಮಿಸಲಾಗಿದೆ. ಈ ಪೈಕಿ ಒಂದು ಗೇಟ್‌ನಿಂದ ಅನಾಯಸವಾಗಿ ನೀರು ಹೊಳೆಗೆ ಹರಿದು ಹೋಗುತ್ತಿದೆ. ಮಳೆಗಾಲಕ್ಕೂ ಮೊದಲು ಭದ್ರಾ ಜಲಾಶಯದ ನಿರ್ವಹಣೆ ಮಾಡಬೇಕು. ಆದರೆ ಮಳೆಗಾಲದ ಹೊತ್ತಿಗೆ ನಿರ್ವಹಣೆ ಮಾಡಲು ಮುಂದಾಗಿದ್ದರು ಎಂಬ ಆರೋಪವಿದೆ. ಈ ಸಂದರ್ಭ ರಿವರ್ ಗೇಟ್‌ಗಳ ಪೈಕಿ ಒಂದು ಗೇಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ನೀರು ಹರಿದು ಹೋಗುತ್ತಿದೆ.
ಸಾಮಾನ್ಯವಾಗಿ ಜಲಾಶಯಗಳ ದುರಸ್ತಿ ಕೆಲಸವನ್ನು ಬೇಸಿಗೆ ಕಾಲದಲ್ಲಿ ನೀರಿಲ್ಲದ ಸಂದರ್ಭದಲ್ಲಿ ಮಾಡುತ್ತಾರೆ. ಆದರೆ ಈ ಅಧಿಕಾರಿಗಳು ಬೇಸಿಗೆ ವೇಳೆ ಸುಮ್ಮನಿದ್ದಾರೆ. ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಈಗ ನೀರು ಪೋಲಾಗುವಾಗ ಅಧಿಕಾರಿಗಳು ಓಡಾಡುತ್ತಿದ್ದಾರೆ. ಇದು ಅಧಿಕಾರಿಗಳು ಆಡಳಿತ ವೈಫಲ್ಯ ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ಭದ್ರಾ ಡ್ಯಾಂನಲ್ಲಿ ಸಂಗ್ರಹಿಸಿಟ್ಟ ನೀರಿಟ್ಟ ಬೇಸಿಗೆಯಲ್ಲಿ ಕುಡಿಯುವ ಉದ್ದೇಶಕ್ಕೆ ಬಳಕೆಯಾಗಬೇಕಿದ್ದ ನೀರು ಮಳೆಗಾದಲ್ಲೇ ಸ್ಲೋಯಿಸ್ ಗೇಟ್ ಮೂಲಕ ಹರಿದು ಹೋಗುತ್ತಿದೆ. ತುರ್ತು ಸಂದರ್ದಲ್ಲಿ ತೆರೆಯಬೇಕಾಗಿದ್ದ ಗೇಟ್ ಅನ್ನು ಈಗಲೇ ಅಧಿಕಾರಿಗಳು ತೆರೆದಿದ್ದಾರೆ ಎನ್ನಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ,
Leave a Reply