ರಾಜ್ಯದಲ್ಲಿ ಝಿಕಾ ವೈರಸ್  ಗೆ ಮೊದಲ ಬಲಿ ! ಶಿವಮೊಗ್ಗದಲ್ಲಿ 74 ವರ್ಷದ ವೃದ್ಧ ಸಾವು ! ಡೆಂಗ್ಯೂ ಭೀತಿ ಬೆನ್ನಲ್ಲೇ ಝಿಕಾ ಆತಂಕ !

ಶಿವಮೊಗ್ಗ : ರಾಜ್ಯದಲ್ಲಿ ಹೆಚ್ಚುತ್ತಿರುವ ಮಳೆಯಿಂದಾಗಿ ಈಗ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಇದರ ಬೆನ್ನಲ್ಲೆ, ಝೀಕಾ ವೈರಸ್ ಕೂಡ ರಾಜ್ಯಕ್ಕೆ ಒಕ್ಕರಿಸಿಕೊಂಡಿದ್ದು, ಇದೀಗ ಶಿವಮೊಗ್ಗದಲ್ಲಿ ಝೀಕಾ ವೈರಸ್ ಗೆ ವೃದ್ಧರೊಬ್ಬರೂ ಸಾವನ್ನಪ್ಪಿದ್ದಾರೆ.

ಹೌದು ಶಿವಮೊಗ್ಗ ಜಿಲ್ಲೆಯ ಗಾಂಧಿ ನಗರದ ನಿವಾಸಿಯ ವೃದ್ಧರು ಜೂನ್ 19ರಂದು ತೀವ್ರ ಜ್ವರದಿಂದ ಬಳಲುತ್ತಿದ್ದರು.ಜೂನ್ 21ರಂದು ಝೀಕಾ ವೈರಸ್ ಪತ್ತೆಯಾಗಿತ್ತು.ಹಾಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ವೃದ್ಧರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಡಿಸ್ಚಾರ್ಜ್ ಆಗಿದ್ದರು.

ಅದಾದ ಬಳಿಕ ಕುಟುಂಬದವರು ಗುರುವಾರ ಮನೆಗೆ ಕರೆದುಕೊಂಡು ಹೋಗಿದ್ದರು. ನಿನ್ನೆ ಮನೆಯಲ್ಲಿ 74 ವರ್ಷದ ವೃದ್ಧರು ಝೀಕಾ ವೈರಸ್ ನಿಂದ ಮೃತಪಟ್ಟಿದ್ದಾರೆ. ಹೀಗಾಗಿ ಶಿವಮೊಗ್ಗದಲ್ಲಿ ಜೀವ ವೈರಸ್ ಗೆ 74 ವರ್ಷದ ವೃದ್ಧರು ಮೊದಲ ಬಲಿಯಾಗಿದ್ದಾರೆ.ಶಿವಮೊಗ್ಗದ ಗಾಂಧಿನಗರದ ಮನೆಯಲ್ಲಿ ಸಾವನ್ನಪ್ಪಿದ್ದಾರೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.