BREAKING NEWS : ಶಿವಮೊಗ್ಗದಲ್ಲಿ ಮತ್ತೆ ಪೊಲೀಸ್ ಫೈಯರ್ ! ಆರೋಪಿ ಕಾಲಿಗೆ ಗುಂಡೇಟು !

ಶಿವಮೊಗ್ಗ : ಶಿವಮೊಗ್ಗದಲ್ಲಿ ಮತ್ತೆ ಪೊಲೀಸ್ ಬಂದೋಕು ಸದ್ದು ಮಾಡಿದೆ. ತಾಲೂಕಿನ ಕುಂಸಿ ಠಾಣಾ ವ್ಯಾಪ್ತಿಯ ತ್ಯಾಜ್ಯವಳ್ಳಿ ಅರಣ್ಯದ ಬಳಿ ಬೆಳ್ಳಂಬೆಳಗ್ಗೆ ಪೊಲೀಸರು ಆರೋಪಿ ಕಾಲಿಗೆ ಗುಂಡು ಹೊಡೆದಿರುವ ಘಟನೆ ನಡೆದಿದೆ. 

ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ರಜಾಕ್ ಎಂಬಾತನನ್ನ ಚಿಕಿತ್ಸೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 109 ಬಿಎನ್ಎಸ್ (ಕೊಲೆ ಯತ್ನ) ಪ್ರಕರಣದಲ್ಲಿ ಬೇಕಿದ್ದ ಆರೋಪಿ ಹಾಗೂ ಎನ್‌ಡಿಪಿಎಸ್‌ ಆಕ್ಟ್‌ ಅಡಿಯಲ್ಲಿ ಮತ್ತು ಕೊಲೆಯತ್ನ ಪ್ರಕರಣವೂ ಸೇರಿದಂತೆ ಒಟ್ಟು ಐದು ಕೇಸ್‌ಗಳಲ್ಲಿ ಬೇಕಿದ್ದ ಆರೋಪಿ ರಜಾಕ್ ತಲೆಮರಿಸಿಕೊಂಡಿದ್ದ.

ಕುಂಸಿ ಪೊಲೀಸ್‌ ಠಾಣೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಪಡೆದ ಹೊಳೆಹೊನ್ನೂರು ಪೊಲೀಸರು ಸಕಲ ರೀತಿಯಲ್ಲೂ ಸಜ್ಜಿತರಾಗಿ ಆರೋಪಿಯನ್ನ ಬಂಧಿಸಲು ತೆರಳಿದ್ದರು.ಈ ವೇಳೆ ರಜಾಕ್‌ ಪೊಲೀಸ್‌ ಸಿಬ್ಬಂದಿ ಅರ್ಜುನ್‌ ಎಂಬವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಪೊಲೀಸ್‌ ಸಿಬ್ಬಂದಿ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.