ಶಿವಮೊಗ್ಗ : ಮುಡಾ ಹಗರಣದ ತನಿಖೆ ಚುರುಕು ಪಡೆಯುತ್ತಿದ್ದಂತೆ ವಿಪಕ್ಷಗಳ ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಎಸ್‌ಎನ್ ಚನ್ನಬಸಪ್ಪ ವಾಗ್ದಾಳಿ ಮಾಡಿದ್ದು, ‘ನೀವು ಕಳಂಕಿತ ಮುಖ್ಯಮಂತ್ರಿ, ಐವಾನ್ ಅಲ್ಲ ಹೈವಾನ್’ ಎಂದು ಹರಿಹಾಯ್ದಿದ್ದಾರೆ. ಅಲ್ಲದೆ ಸಿದ್ದರಾಮಯ್ಯರವರದ್ದು ತಪ್ಪಿಲ್ಲವಾದರೇ ತನಿಖೆ ಎದುರಿಸಿ ಬರಲಿ ನಾವೇ ಅವರ ಪಾದವನ್ನು ತೊಳೆಯುತ್ತೇವೆ ಎಂದು ಸವಾಲ್ ಹಾಕಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಸಂವಿಧಾನವನ್ನ ಬುಡಮೇಲು ಮಾಡುವ ಕೆಲಸಕ್ಕೆ ಕೈ ಹಾಕಿದೆ’ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಹೇಳಿದ್ದೆ ಸಂವಿಧಾನ ಅಂದುಕೊಂಡಿದ್ದಾರೆ. ಇಡೀ ದೇಶಕ್ಕೆ ರಾಜ್ಯಕ್ಕೆ ಅಪಮಾನ ಮಾಡಿದ ಕೀರ್ತಿ ಕಾಂಗ್ರೆಸ್ ಗೆ ಇದೆ ಎಂದು ಗುಡುಗಿದ್ದಾರೆ.
ರಾಜ್ಯಪಾಲರನ್ನ ಗುರಿಯಾಗಿಟ್ಟುಕೊಂಡು ವಿರೋಧ ಮಾಡ್ತಾ ಇದ್ದಾರೆ. ನೈತಿಕತೆ ನೆಲೆಗಟ್ಟು ಇಟ್ಟುಕೊಂಡು ಪ್ರಶ್ನೆ ಮಾಡಬೇಕು. ರಾಜ್ಯಪಾಲರ ನಿರ್ಣಯಕ್ಕೆ ಕಾಂಗ್ರೆಸ್ ಅಪಮಾನ ಮಾಡ್ತಾ ಇದೆ. ಇದು ರಾಜ್ಯದ ಜನರಿಗೆ ಅಪಮಾನ ಮಾಡಿದ ಹಾಗೆ ಎಂದು ಅವರು ಕಿಡಿ ಕಾರಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಬದುಕಿದ್ದೀಯಾ ಅನ್ನೋದು ಪ್ರಶ್ನೆಯಾಗಿದೆ. ಇಡೀ ವ್ಯವಸ್ಥೆ ಬುಡಮೇಲು ಮಾಡೋಕೆ ಹೊರಟಿದ್ದಾರೆ, ಅದಕ್ಕೆ ಕ್ರಮ ಇಲ್ವಾ? ಸುಳ್ಳು ಹೇಳುವ ಪ್ರಕ್ರಿಯೆ ಸರಿನಾ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ. ಒಂದು ವ್ಯವಸ್ಥೆಗೆ ಕಳಂಕ ತರುವ ಕೆಲಸ ಮಾಡಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ರಾಜ್ಯ ಸರ್ಕಾರಕ್ಕೆ ನೈತಿಕತೆ ಇಲ್ಲ. ನಿಮ್ಮ ಹಿರಿತನಕ್ಕೆ ತಕ್ಕ ನಡವಳಿಕೆ ಅಲ್ಲ. ನೀವು ತಪ್ಪು ಮಾಡಿಲ್ಲ ಅಂದ್ರೆ ಭಯ ಯಾಕೆ ಸಿದ್ದರಾಮಯ್ಯ ಅವರೇ.. ತನಿಖೆ ನಡೆಸಲು ತಾಕತ್ತು ಇಲ್ವ ಸಿದ್ದರಾಮಯ್ಯ.. ಪಲಾಯನ ವಿಧಾನಸೌಧದಲ್ಲೇ ಮಾಡಿದ್ದೀರಾ.. ನೀವು ಕಳಂಕಿತ ಮುಖ್ಯಮಂತ್ರಿ… ಭ್ರಷ್ಟಾಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮುಳುಗಿದ್ದಾರೆ ಎಂದು ಆರೋಪಿಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
ಇದನ್ನೂ ಓದಿ : ಡಿ.ವಿ.ಎಸ್ ಸ್ವತಂತ್ರ ಪಿ ಯು ಕಾಲೇಜಿಗೆ ಸಮಗ್ರ ಪ್ರಶಸ್ತಿ
I will wash Siddaramaiah’s feet and drink water! Why did BJP MLA Channabasappa say this?
Shimoga: As the investigation of the Muda scam is gaining momentum, the accusations of the opposition are increasing. MLA SN Channabasappa lashed out at CM Siddaramaiah and said ‘You are a tainted Chief Minister, Ivan not Haivan’. He also challenged that if Siddaramaiah is not guilty, let him face the investigation and we will wash his feet.
Speaking to reporters in Shimoga today, he alleged that ‘Congress has started the work of subverting the Constitution’. Congress said they thought it was the constitution. He thundered that Congress has the honor of insulting the state to the entire country.
They are opposing the governor. Questioning should be done keeping morality in mind. Congress is insulting the Governor’s decision. He said that this is an insult to the people of the state.
The question is whether law and order has survived. They are going to subvert the whole system, is there any action for it? Is the process of lying correct? Law and order is dead in the state. Worked to tarnish a system. He demanded that CM Siddaramaiah should resign.
This state government has no ethics. Not befitting of your seniority. You have not done anything wrong, why are you afraid of Siddaramaiah.. Siddaramaiah did not have the strength to conduct an investigation.. Did you run away from the Vidhana Soudha?.. You are a tainted Chief Minister… He accused CM Siddaramaiah of being drowned in corruption.
Report: Lingaraj Gadikoppa
Leave a Reply