ಆನಂದಪುರ ಪೊಲೀಸರಿಂದ ವಿದ್ಯಾರ್ಥಿನಿಯರಿಗೆ ಕಾನೂನು ಅರಿವು ಕಾರ್ಯಕ್ರಮ

ಆನಂದಪುರ: ಕೇವಲ ಶಿಕ್ಷಣ ಮಾತ್ರವಲ್ಲ, ಕಾನೂನಿನ ಬಗ್ಗೆಯೂ ವಿದ್ಯಾರ್ಥಿಗಳಿಗೆ ಅರಿವಿರಬೇಕು ಎಂದು ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ತಿಳಿಸಿದ್ದಾರೆ. ಇಂದು ಸಮೀಪದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ಅರಿತು ಜೀವನ ರೂಪಿಸಿಕೊಳ್ಳಿ:“ವಿದ್ಯಾರ್ಥಿನಿಯರು ಕಾನೂನನ್ನು ಅರಿತು, ಗೌರವಿಸುತ್ತಾ ಜೀವನವನ್ನು ರೂಪಿಸಿಕೊಳ್ಳಬೇಕು. ಕಾನೂನಿನ ತಿಳುವಳಿಕೆ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ. ಕಾನೂನನ್ನು ಗೌರವಿಸುವುದು ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕ” ಎಂದು ಪ್ರವೀಣ್ ಸರ್ ಸಲಹೆ ನೀಡಿದರು.

ಸಾಮಾಜಿಕ ಬದಲಾವಣೆಗೆ ಕೊಡುಗೆ ನೀಡಿ:ಸಮಾಜದಲ್ಲಿ ಕಾನೂನು ಉಲ್ಲಂಘನೆಯಾದಾಗ ಅಥವಾ ಅಶಾಂತಿ ಉಂಟಾದಾಗ, ವಿದ್ಯಾರ್ಥಿಗಳು ಕಾನೂನು ಪಾಲಿಸಿ ಸಾಮಾಜಿಕ ಬದಲಾವಣೆಗೆ ಕಾರಣರಾಗಬೇಕು ಎಂದು ಅವರು ಕರೆ ನೀಡಿದರು.

ಸೈಬರ್ ಕ್ರೈಂ ಬಗ್ಗೆ ಎಚ್ಚರಿಕೆ:

“ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಮತ್ತು ಹೊಸ ತಂತ್ರಜ್ಞಾನಗಳು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ವಿದ್ಯಾರ್ಥಿನಿಯರು ಆದಷ್ಟು ಫೋನ್‌ಗಳಿಂದ ದೂರವಿರಿ, ಏಕೆಂದರೆ ಫೋನ್ ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿ” ಎಂದು ತಿಳಿಸಿದರು.

ಪೊಲೀಸ್ ಇಲಾಖೆಯ ನೆರವು ಸದಾ ಲಭ್ಯ:

“ಯಾವುದೇ ಸಂದರ್ಭದಲ್ಲಾದರೂ ವಿದ್ಯಾರ್ಥಿನಿಯರು ಪೊಲೀಸರನ್ನು ಸಂಪರ್ಕಿಸಬಹುದು. ನಾವು ನಿಮಗೆ ಆದಷ್ಟು ಬೇಗನೆ ನೆರವಾಗುತ್ತೇವೆ” ಎಂದು ಪ್ರವೀಣ್ ಸರ್ ಭರವಸೆ ನೀಡಿದರು. ಪೊಲೀಸ್ ಇಲಾಖೆ ನಿಮ್ಮ ಸುರಕ್ಷತೆಗಾಗಿ ಸದಾ ಸಿದ್ಧವಿದೆ ಎಂದು ಪುನರುಚ್ಚರಿಸಿದರು.

ಸಂದರ್ಭದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ವಾರ್ಡನ್ ಅರ್ಪಿತಾ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರ ಸುರಕ್ಷತೆ ಮತ್ತು ಕಾನೂನು ಅರಿವಿಗಾಗಿ ಪೊಲೀಸ್ ಇಲಾಖೆಯ ಈ ಕ್ರಮ ನಿಜಕ್ಕೂ ಶ್ಲಾಘನೀಯ! ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.

ವರದಿ : ಅಮಿತ್ ಆನಂದಪುರಂ


Leave a Reply

Your email address will not be published.