ಶಿವಮೊಗ್ಗದಲ್ಲಿ ‘ತುರ್ತು ಪರಿಸ್ಥಿತಿ’ ಕುರಿತು ಪ್ರಬಂಧ ಸ್ಪರ್ಧೆ: ವಿದ್ಯಾರ್ಥಿ ಮತ್ತು ಸಾರ್ವಜನಿಕರಿಗೆ ಬಂಪರ್ ಬಹುಮಾನ! ನೋಂದಣಿಗೆ ನಾಳೆ ಅಂತಿಮ ದಿನ!

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಬಿಜೆಪಿ ಹಾಗೂ ಬಿಜೆಪಿ ಶಿವಮೊಗ್ಗ ನಗರ ವತಿಯಿಂದ ತುರ್ತು ಪರಿಸ್ಥಿತಿಯ ಕುರಿತು ಜೂನ್ 26, 2025 ರಂದು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ‘ತುರ್ತು ಪರಿಸ್ಥಿತಿ’ ವಿಷಯದ ಕುರಿತು ನಡೆಯುವ ಈ ಸ್ಪರ್ಧೆಯಲ್ಲಿ ವಿಜೇತರಿಗೆ ಆಕರ್ಷಕ ನಗದು ಬಹುಮಾನ ವನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಸ್ಪರ್ಧೆಯ ಪ್ರಮುಖ ವಿವರಗಳು:

ದಿನಾಂಕ: ಜೂನ್ 26, 2025 (ಗುರುವಾರ)

ಸ್ಥಳ: ಬಿಜೆಪಿ ಜಿಲ್ಲಾ ಕಚೇರಿ, ಶಿವಮೊಗ್ಗ.

ಎರಡು ವಿಭಾಗಗಳು ಮತ್ತು ವಿಷಯಗಳು:

1. ಕಾಲೇಜು ವಿದ್ಯಾರ್ಥಿಗಳ ವಿಭಾಗ (PUC ಮೇಲ್ಪಟ್ಟು):

    ವಿಷಯ: 1975ರ ‘ತುರ್ತು ಪರಿಸ್ಥಿತಿ ನಾನು ತಿಳಿದಂತೆ’

   ಸಮಯ: ಬೆಳಿಗ್ಗೆ 9:30 ರಿಂದ 10:30 ರವರೆಗೆ.

    ಸೂಚನೆ: ವಿದ್ಯಾರ್ಥಿಗಳು ಬೆಳಿಗ್ಗೆ 9:00 ಗಂಟೆಗೆ ಕಾಲೇಜಿನ ಗುರುತಿನ ID ಕಾರ್ಡ್‌ನೊಂದಿಗೆ ಉಪಸ್ಥಿತರಿರಬೇಕು. ಪ್ರಬಂಧವು ಎರಡು ಪುಟಗಳಿಗಿಂತ ಮೀರಿರಬಾರದು.

2. ಸಾರ್ವಜನಿಕರ ವಿಭಾಗ:

    ವಿಷಯ: “1975 ರ ತುರ್ತು ಪರಿಸ್ಥಿತಿಯ ಹೇರಿಕೆ ಮತ್ತು ಪರಿಣಾಮಗಳು”

    ಸಮಯ: ಬೆಳಿಗ್ಗೆ 11:00 ರಿಂದ 12:30 ರವರೆಗೆ.

    ಸೂಚನೆ: ಸಾರ್ವಜನಿಕರು ಬೆಳಿಗ್ಗೆ 11:00 ಗಂಟೆಗೆ ಉಪಸ್ಥಿತರಿರಬೇಕು. ಪ್ರಬಂಧವು ಮೂರು ಪುಟಗಳಿಗಿಂತ ಮೀರಿರಬಾರದು.

ಇದನ್ನು ಓದಿ : ರೈಲ್ವೆ ನೇಮಕಾತಿ 2025: SSLC, ITI, ಪದವೀಧರರಿಗೆ 6180 ಟೆಕ್ನೀಷಿಯನ್ ಹುದ್ದೆಗಳ ಬೃಹತ್ ಅವಕಾಶ! ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

ಬಹುಮಾನಗಳು (ಪ್ರತಿ ವಿಭಾಗಕ್ಕೂ ಪ್ರತ್ಯೇಕವಾಗಿ):

ಪ್ರಥಮ ಬಹುಮಾನ: ₹5,000

ದ್ವಿತೀಯ ಬಹುಮಾನ: ₹3,000

ತೃತೀಯ ಬಹುಮಾನ: ₹2,000

ನೋಂದಣಿ ಮಾಹಿತಿ ಮತ್ತು ನಿಯಮಗಳು:

ಪ್ರಬಂಧ ಸ್ಪರ್ಧೆಗೆ ನೋಂದಾಯಿಸಲು ಜೂನ್ 25, 2025 ರ ಸಂಜೆ ಧಾರಂ ಗಂಟೆಯೊಳಗೆ ನೋಂದಾಯಿಸತಕ್ಕದ್ದು.

ನೋಂದಣಿಗಾಗಿ ಸಂಪರ್ಕಿಸಿ:

  • ಸಂಚಾಲಕರು: ಎಸ್. ಜ್ಞಾನೇಶ್ವರ್ – 9449088644
  • ಸಹ ಸಂಚಾಲಕರು: ಡಾ. ಶಿ. ಹ. ಜಯರಾಮ – 9449284492
  • ಪ್ರಬಂಧ ಬರೆಯುವ ಹಾಳೆಯನ್ನು ಸ್ಪರ್ಧಾ ಸ್ಥಳದಲ್ಲಿ ನೀಡಲಾಗುತ್ತದೆ.
  • ಭಾಗವಹಿಸುವವರು ತಮ್ಮ ಪೆನ್ನು ಮತ್ತು ಒತ್ತಿಗೆ ಕ್ಲಿಪ್‌ಪಾಡ್ ತರಬೇಕು.
  • ಮೌಲ್ಯಮಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ.

ಫಲಿತಾಂಶ ಮತ್ತು ಬಹುಮಾನ ವಿತರಣೆ:

  • ದಿನಾಂಕ: ಜೂನ್ 27, 2025 (ಶುಕ್ರವಾರ)
  • ಸಮಯ: ಸಂಜೆ 5:30
  • ಸ್ಥಳ: ಅಂಬೇಡ್ಕರ್ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಜೇತರನ್ನು ಘೋಷಿಸಿ ಬಹುಮಾನ ವಿತರಿಸಲಾಗುವುದು.

ಈ ಪ್ರಬಂಧ ಸ್ಪರ್ಧೆಯಲ್ಲಿ ಶಿವಮೊಗ್ಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಿಮ್ಮ ಆಲೋಚನೆಗಳನ್ನು ಹಂಚಿಕೊಂಡು ಬಹುಮಾನ ಗೆಲ್ಲುವಂತೆ ಬಿಜೆಪಿ ವತಿಯಿಂದ ವಿನಂತಿಸಲಾಗಿದೆ.

WhatsApp Number : 7795829207


Leave a Reply

Your email address will not be published.