ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಜನಸೇವೆಗಾಗಿ ತೆರೆದಿರುವ “ಗ್ರಾಮ ಒನ್” ಕೇಂದ್ರವೊಂದರ ಪರವಾನಗಿಯನ್ನು ಜಿಲ್ಲಾಧಿಕಾರಿಗಳು ರದ್ದುಗೊಳಿಸಿದ್ದಾರೆ. ರಿಪ್ಪನ್ ಪೇಟೆ ಪಟ್ಟಣದ ಸಾಗರ ರಸ್ತೆಯಲ್ಲಿರುವ ಗ್ರಾಮ ಒನ್ ಕೇಂದ್ರದಲ್ಲಿ ಸಾರ್ವಜನಿಕರಿಂದ ಸೇವಾ ಶುಲ್ಕಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಸಮಾಜ ಸೇವಕ ರಫಿ ರಿಪ್ಪನ್ ಪೇಟೆ ಅವರು ಈ ಬಗ್ಗೆ ದೂರು ನೀಡಿದ್ದರು. ದೂರಿನ ಸತ್ಯಾಂಶವನ್ನು ಪರಿಶೀಲಿಸಲು ಉಪ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ, ಆರೋಪದಲ್ಲಿ ಸತ್ಯಾಂಶವಿದೆ ಎಂದು ತಹಶೀಲ್ದಾರ್ ರಶ್ಮಿ ಹೆಚ್ ಅವರಿಗೆ ವರದಿ ಸಲ್ಲಿಸಿದ್ದರು. ಈ ವರದಿಯ ಆಧಾರದ ಮೇಲೆ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಕ್ಷಣ ಕೇಂದ್ರದ ಪರವಾನಗಿಯನ್ನು ರದ್ದುಗೊಳಿಸಲು ಆದೇಶಿಸಿದ್ದಾರೆ.
ತಹಶೀಲ್ದಾರ್ ರಶ್ಮಿ ಹಾಲೇಶ್ ಅವರು, ಕಂದಾಯ ಇಲಾಖೆಯ ವರದಿಯ ನಂತರ ಜಿಲ್ಲಾಧಿಕಾರಿಗಳಿಗೆ ಕೇಂದ್ರದ ಐಡಿಯನ್ನು ರದ್ದುಗೊಳಿಸುವಂತೆ ವರದಿ ಸಲ್ಲಿಸಲಾಗಿತ್ತು. ಅದರಂತೆ ಐಡಿ ರದ್ದುಪಡಿಸಿ ಕೇಂದ್ರದ ನಾಮಫಲಕಗಳನ್ನು ತೆರವುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ : ಚನ್ನಗಿರಿಯಲ್ಲಿ ವಿಲಕ್ಷಣ ಘಟನೆ: ಅಳಿಯನ ಜೊತೆ ಓಡಿಹೋದ ಅತ್ತೆ!ಪೂರ್ತಿ ಓದಲು ಕೆಳಗಿರುವ ಲಿಂಕ್ ಮಾಡಿ
ಹೊಸನಗರ ತಾಲೂಕಿನ ಯಾವುದೇ ಗ್ರಾಮ ಒನ್ ಕೇಂದ್ರದಲ್ಲಿ ಹೆಚ್ಚುವರಿ ಹಣ ಕೇಳಿದರೆ ಅಥವಾ ಸಕಾಲ ಸೇವೆಗಳಿಗೆ ಹೆಚ್ಚು ಹಣ ಕೇಳಿದರೆ, ಸಾರ್ವಜನಿಕರು ತಕ್ಷಣ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಅಥವಾ ನೇರವಾಗಿ ತಹಶೀಲ್ದಾರ್‌ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
WhatsApp Number : 7795829207
Leave a Reply