ಶಿವಮೊಗ್ಗ: ಸೊರಬ ತಾಲೂಕಿನ ಕಪ್ಪಗಾಲ ಗ್ರಾಮದಲ್ಲಿ ವಿದ್ಯುತ್ ಆಘಾತದಿಂದ ದಂಪತಿ ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ. ಮನೆಯ ಹೊರಗೆ ಕಬ್ಬಿಣದ ತಂತಿಗೆ ಬಟ್ಟೆ ಒಣಹಾಕುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಕಪ್ಪಗಾಲ ಗ್ರಾಮದ ನಿವಾಸಿಗಳಾದ 55 ವರ್ಷದ ಕೃಷ್ಣಪ್ಪ ಮತ್ತು ಅವರ ಪತ್ನಿ 42 ವರ್ಷದ ವಿನೋಧಾ ಮೃತರು. ವಿನೋಧಾ ಅವರು ಬಟ್ಟೆ ಒಣಹಾಕುತ್ತಿದ್ದ ಕಬ್ಬಿಣದ ತಂತಿಗೆ ವಿದ್ಯುತ್ ಪ್ರವಹಿಸಿದ್ದು, ಅವರಿಗೆ ವಿದ್ಯುತ್ ಶಾಕ್ ತಗುಲಿದೆ. ಪತ್ನಿಯನ್ನು ರಕ್ಷಿಸಲು ಮುಂದಾದ ಎಲೆಕ್ಟ್ರಿಷಿಯನ್ ಆಗಿದ್ದ ಕೃಷ್ಣಪ್ಪ ಕೂಡ ವಿದ್ಯುತ್ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ದಂಪತಿಗೆ ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಈ ಘಟನೆ ಕುರಿತು ಸೊರಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ : ಸಿಗಂದೂರು ಸೇತುವೆಯಲ್ಲಿ ಯಶಸ್ವಿ ಲೋಡ್ ಪರೀಕ್ಷೆ: ಸಂಚಾರಕ್ಕೆ ಮುಕ್ತವಾಗಲು ಅಂತಿಮ ಹಂತದಲ್ಲಿ ರಾಜ್ಯದ ಅತಿ ಉದ್ದದ ಕೇಬಲ್ ಸೇತುವೆ!
WhatsApp Number : 7795829207
Leave a Reply