ಶಿವಮೊಗ್ಗ : ಇಂದು ಬೆಳಿಗ್ಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂಖ್ಯೆ 12ರ ಬಾಪೂಜಿನಗರ ಪ್ರದೇಶಕ್ಕೆ ಶಾಸಕರಾದ ಎಸ್.ಎನ್. ಚನ್ನಬಸಪ್ಪ ಅವರು ಭೇಟಿ ನೀಡಿದರು.
ಈ ಭೇಟಿಯ ವೇಳೆ ಶಾಸಕರು, ಬಾಪೂಜಿನಗರದ ಸ್ಥಳೀಯ ನಿವಾಸಿಗಳಿಂದ ಬಡಾವಣೆಯ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಪಡೆದರು. ನಿವಾಸಿಗಳು ತಮ್ಮ ದೂರುಗಳನ್ನು ಶಾಸಕರ ಮುಂದಿಟ್ಟರು.
ಜಾಹಿರಾತು:
ತಕ್ಷಣದ ಕ್ರಮಕ್ಕೆ ಸೂಚನೆ
ಸಮಸ್ಯೆಗಳನ್ನು ಆಲಿಸಿದ ಶಾಸಕರು, ಅವುಗಳ ತಕ್ಷಣದ ಬಗೆಹರಿಕೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಅಲ್ಲದೆ, ಅಗತ್ಯ ಕ್ರಮಗಳನ್ನು ಕಾಲಹರಣ ಮಾಡದೆ ತಕ್ಷಣ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಾರ್ಡ್‌ನ ಪ್ರಮುಖರು, ಸ್ಥಳೀಯ ನಾಯಕರು ಹಾಗೂ ಸಮರ್ಪಿತ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನು ಓದಿ : ಹೊಸನಗರ: ಮೇಯಲು ಬಿಟ್ಟ ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು!! ಏನಿದು ಪ್ರಕರಣ? ಪೂರ್ತಿ ಓದಲು ಕೆಳಗಿರುವ ಕ್ಲಿಕ್ ಮಾಡಿ
WhatsApp Number : 7795829207
Leave a Reply