ಬಾನುಮುಸ್ತಾಕ್ ರವರ ಕಥೆಗಳಲ್ಲಿ ಮಹಿಳೆಯರ ಸಂಕಷ್ಟದ ಆರ್ತನಾದ: ಡಾ. ಕುಂಸಿ ಉಮೇಶ್

ಶಿವಮೊಗ್ಗ: ಲೇಖಕಿ ಬಾನುಮುಸ್ತಾಕ್ ಅವರ ಕಥೆಗಳು ಜಗತ್ತಿನ ಮಹಿಳೆಯರ ಸಂಕಷ್ಟಗಳನ್ನು, ಧಮನೀತ ಹೆಣ್ಣಿನ ಆರ್ತನಾದಗಳನ್ನು ಬಿಂಬಿಸುತ್ತವೆ ಎಂದು ಲೇಖಕ ಹಾಗೂ ವಿಮರ್ಶಕ ಡಾ. ಕುಂಸಿ ಉಮೇಶ್ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾನುಮುಸ್ತಾಕ್ ಅವರ “ಎದೆಯ ಹಣತೆ” ಪುಸ್ತಕ ಕುರಿತು ಮಾತನಾಡಿದ ಅವರು, ಈ ಕಥೆಗಳು ನಿರ್ಭಯ ಸಮಾಜ ನಿರ್ಮಾಣಕ್ಕೆ ಅನುಭೂತಿಯ ಮಹತ್ವವನ್ನು ಸಾರುತ್ತವೆ ಎಂದರು.

ಇದನ್ನು ಓದಿ : ಯೂನಿಯನ್ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: 7ನೇ ತರಗತಿಯಿಂದ ಪದವೀಧರರಿಗೆ ಅವಕಾಶ! ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ…

ಬಾನುಮುಸ್ತಾಕ್ ಅವರ “ಎದೆಯ ಹಣತೆ” ಕೃತಿ ಇಂಗ್ಲಿಷ್‌ಗೆ ಅನುವಾದಗೊಂಡು ಬೂಕರ್ ಪ್ರಶಸ್ತಿ ಗಳಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ ಎಂದು ಡಾ. ಉಮೇಶ್ ಶ್ಲಾಘಿಸಿದರು. ಸುಮಾರು 30 ವರ್ಷಗಳಿಂದ ಬರೆಯುತ್ತಿರುವ ಬಾನುಮುಸ್ತಾಕ್ ಅವರು ತಮ್ಮ ಕಥೆಗಳ ಮೂಲಕ ಕನ್ನಡ ಭಾಷೆಗೆ ಚಲನಶೀಲತೆಯನ್ನು ನೀಡಿದ್ದಾರೆ. ಟೈಲರ್, ಪತ್ರಕರ್ತೆ, ಹೋರಾಟಗಾರ್ತಿ, ಶಿಕ್ಷಕಿ ಹೀಗೆ ವಿವಿಧ ಕ್ಷೇತ್ರಗಳಲ್ಲಿನ ಅವರ ಅನುಭವಗಳು ಕಥೆಗಳಲ್ಲಿ ಧ್ವನಿಸಿವೆ ಎಂದು ಅವರು ವಿವರಿಸಿದರು. ಒಬ್ಬ ಮುಸ್ಲಿಂ ಲೇಖಕಿಯಾಗಿ ಅವರು ಎದುರಿಸಿದ ಸವಾಲುಗಳನ್ನೂ ಅವರು ಸ್ಮರಿಸಿದರು.

ಜಾಹಿರಾತು:

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಎಲ್.ಎನ್. ಮುಕುಂದ್‌ರಾಜ್ ಮಾತನಾಡಿ, ಕನ್ನಡ ಪ್ರಜ್ಞೆ ಕೋಮುವಾದಿಗಳ ಕೈಯಲ್ಲಿ ಸಿಕ್ಕಿ ನಲುಗುತ್ತಿದೆ. ಸತ್ಯ ಹೇಳಲು ಹೆದರಬೇಕಾದ ಅನಿವಾರ್ಯತೆ ಇಲ್ಲ. ಸಾಹಿತ್ಯದ ವ್ಯಾಪ್ತಿಯನ್ನು ವಿಸ್ತರಿಸಿ, ಕನ್ನಡ ಪ್ರಜ್ಞೆಯನ್ನು ಹೃದಯದಲ್ಲಿಟ್ಟು ಸಾಕಬೇಕು ಎಂದರು. ಬಸವಣ್ಣ, ಪಂಪ, ಕುವೆಂಪು ಮುಂತಾದವರ ಪರಂಪರೆಯನ್ನು ಸ್ಮರಿಸಿದ ಅವರು, ದಲಿತರು, ಶೂದ್ರರು, ಮಹಿಳೆಯರ ಪರವಾಗಿ ಮಾತನಾಡುವವರನ್ನು ಶತ್ರುಗಳಂತೆ ನೋಡುವ ಪ್ರವೃತ್ತಿ ಅಪಾಯಕಾರಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯೆ ಪಿ. ಚಂದ್ರಿಕಾ ಮಾತನಾಡಿ, ಕಸಾಪ ರಾಜ್ಯಾದ್ಯಂತ ‘ಚಕೋರ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಾಂಸ್ಕೃತಿಕ, ಸೂಕ್ಷ್ಮ ಸಂವೇದನೆ, ವಿಜ್ಞಾನ ಮತ್ತು ವೈಚಾರಿಕತೆಯನ್ನು ಬೆಳೆಸುವುದು ಇದರ ಉದ್ದೇಶವಾಗಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನುಮುಸ್ತಾಕ್ ಅವರ ಹೆಸರು ಪ್ರಸ್ತಾಪವಾಗಿರುವುದು ಸಂತಸದ ವಿಷಯ ಎಂದರು.

 ಆನಂದಪುರ: ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ! ಏನಿದು ಪ್ರಕರಣ?  ಪೂರ್ತಿ ಓದಲು ಕೆಳಗಿರುವ ಕ್ಲಿಕ್ ಮಾಡಿ

ಈ ಕಾರ್ಯಕ್ರಮದಲ್ಲಿ ಚಕೋರ ಸಂಚಾಲಕ ಡಾ. ಸಿರಾಜ್ ಅಹ್ಮದ್, ಶಂಕರ್ ಸಿಹಿಮೊಗೆ, ಪ್ರಜ್ಞಾ ಬುಕ್ ಗ್ಯಾಲರಿಯ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಅಮಿತ್ ಆನಂದಪುರ

ಜಾಹಿರಾತು:

WhatsApp Number : 7795829207


Leave a Reply

Your email address will not be published.