‘ಒಡಲಾಳ’ದ ಸಾಕವ್ವದಿಂದ ‘ಶರ್ಮಿಷ್ಠೆ’ಯಾಗಿ ಉಮಾಶ್ರೀ ರಂಗದ ಮೇಲೆ! ಜುಲೈ 12 ರಂದು ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನ.
ಶಿವಮೊಗ್ಗ: ಕರ್ನಾಟಕದ ರಂಗಭೂಮಿ ಕಂಡ ಶ್ರೇಷ್ಠ ಕಲಾವಿದೆ, ‘ಒಡಲಾಳ’ ನಾಟಕದ ‘ಸಾಕವ್ವ’ ಎಂದೇ ಖ್ಯಾತಿ ಪಡೆದಿರುವ ಉಮಾಶ್ರೀ ಅವರು, ಇದೇ ಮೊದಲ ಬಾರಿಗೆ ಏಕವ್ಯಕ್ತಿಯಾಗಿ ರಂಗದ ಮೇಲೆ ಅಭಿನಯಿಸುತ್ತಿರುವ “ಶರ್ಮಿಷ್ಠೆ” ನಾಟಕವು ಶಿವಮೊಗ್ಗದಲ್ಲಿ ಪ್ರದರ್ಶನಗೊಳ್ಳಲಿದೆ. ‘ರಂಗಸಂಪದ’ ತಂಡದ ಮೂಲಕವೇ ಹವ್ಯಾಸಿ ರಂಗಭೂಮಿಯಲ್ಲಿ ಮನ್ನಣೆ ಪಡೆದಿದ್ದ ಉಮಾಶ್ರೀ, ಈಗ ಅದೇ ತಂಡದ ಸಹಯೋಗದಲ್ಲಿ ‘ಶರ್ಮಿಷ್ಠೆ’ಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ನಾಟಕದ ಕುರಿತು
‘ಶರ್ಮಿಷ್ಠೆ’ ನಾಟಕವು ಅತ್ಯಂತ ಸಂಕೀರ್ಣ ವ್ಯಕ್ತಿತ್ವವುಳ್ಳ, ವರ್ತಮಾನದ ನೆಲೆಗಟ್ಟಿನಲ್ಲಿ ನಿಂತು ನಮ್ಮನ್ನು ಪ್ರಶ್ನಿಸುವ ಒಂದು ಕೃತಿ. ಯಾಯತಿ, ಪುರು ಮತ್ತು ಶರ್ಮಿಷ್ಠೆಯರ ನಡುವಿನ ತ್ರಿಕೋನ ಸಂಘರ್ಷವು ಹಲವು ಆಯಾಮಗಳನ್ನು ಅನಾವರಣಗೊಳಿಸುತ್ತಾ, ಮಾನಸಿಕ ಸ್ಥಿತ್ಯಂತರಗಳನ್ನು ವರ್ತಮಾನದ ಸಂದರ್ಭದಲ್ಲಿ ತೆರೆದಿಡುತ್ತದೆ. ಶರ್ಮಿಷ್ಠೆ, ಭೂತಕಾಲದ ಭ್ರಮೆ ಹೊತ್ತ ಯಾಯತಿ ಮತ್ತು ಹುಸಿ ವಾರ್ಧಕ್ಯದ ಭವಿಷ್ಯತ್ತನ್ನು ಹೊತ್ತ ಪುರುವನ್ನೂ ಪ್ರಶ್ನಿಸುತ್ತಾ, ಅವರ ಹುಚ್ಚಾಟಕ್ಕೆ ಅಂತ್ಯ ಹಾಡಿ, ಕಾಲವನ್ನು ವರ್ತಮಾನದ ನೆಲೆಯಲ್ಲಿ ಸ್ಥಿತಗೊಳಿಸುತ್ತಾಳೆ. ಈ ನಾಟಕ ಕೃತಿಗೆ ಮುಂಬೈನ ಮೈಸೂರು ಅಸೋಸಿಯೇಷನ್ ಕನ್ನಡ ಸಂಘದ ಪ್ರಥಮ ರಾಷ್ಟ್ರೀಯ ಬಹುಮಾನ ಅರಸಿ ಬಂದಿದೆ.
ತಂಡ ಮತ್ತು ನಿರ್ದೇಶನ
ನಾಟಕದ ರಚನೆ ಡಾ. ಬೇಲೂರು ರಘುನಂದನ್ ಅವರದ್ದು. ಕವಿ, ನಾಟಕಕಾರ, ರಂಗನಿರ್ದೇಶಕ, ಅಧ್ಯಾಪಕ, ಲೇಖಕರಾಗಿ ಗುರುತಿಸಿಕೊಂಡಿರುವ ಇವರು 38ಕ್ಕೂ ಹೆಚ್ಚು ನಾಟಕಗಳನ್ನು ಮತ್ತು 500ಕ್ಕೂ ಹೆಚ್ಚು ರಂಗಗೀತೆಗಳನ್ನು ರಚಿಸಿದ್ದಾರೆ. ಇವರ ಸಾಹಿತ್ಯ ಮತ್ತು ರಂಗಭೂಮಿ ಕೆಲಸಕ್ಕೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.
ಶಿವಮೊಗ್ಗ: ಹೃದಯಾಘಾತದಿಂದ ಡಿ.ವಿ.ಎಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ಓದುತಿದ್ದ ವಿದ್ಯಾರ್ಥಿ ಸಾವು – ಗ್ರಾಮದಲ್ಲಿ ಶೋಕ ಮಡುಗಿದೆ! ಪೂರ್ತಿ ಓದಲು ಕೆಳಗಿರುವ ಕ್ಲಿಕ್ ಮಾಡಿ
ಜಾಹಿರಾತು:
ಈ “ಶರ್ಮಿಷ್ಠೆ” ನಾಟಕಕ್ಕೆ ಭಾರತೀಯ ರಂಗಭೂಮಿಯ ಅಪರೂಪದ ರಂಗನಿರ್ದೇಶಕರಲ್ಲಿ ಒಬ್ಬರಾದ, ರಾಷ್ಟ್ರೀಯ ನಾಟಕಶಾಲೆಯ ಪದವೀಧರರೂ ಆಗಿರುವ ಚಿದಂಬರ ರಾವ್ ಜಂಬೆ ಅವರು ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. ಇವರು ಕನ್ನಡ ರಂಗಭೂಮಿಗೆ ನೂರಾರು ಪ್ರತಿಭಾವಂತರನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಪ್ರದರ್ಶನ ವಿವರಗಳು:
- ನಾಟಕ: ಶರ್ಮಿಷ್ಠೆ
- ರಚನೆ: ಡಾ. ಬೇಲೂರು ರಘುನಂದನ್
- ವಿನ್ಯಾಸ ಮತ್ತು ನಿರ್ದೇಶನ: ಚಿದಂಬರ ರಾವ್ ಜಂಬೆ
- ಅಭಿನಯ: ಉಮಾಶ್ರೀ (ಏಕವ್ಯಕ್ತಿ ಪ್ರದರ್ಶನ)
- ದಿನಾಂಕ: ಜುಲೈ 12, 2025
- ಸಮಯ: ಸಂಜೆ 6:45ಕ್ಕೆ
- ಸ್ಥಳ: ಕುವೆಂಪು ರಂಗಮಂದಿರ, ಶಿವಮೊಗ್ಗ
ಆಯೋಜಕರು: ಮುಖಾ-ಮುಖಿ ಎಸ್.ಟಿ. ರಂಗತಂಡ(ರಿ) ಶಿವಮೊಗ್ಗ
ಶಿವಮೊಗ್ಗದ ರಂಗಭೂಮಿ ಚಟುವಟಿಕೆಗಳಿಗೆ ನಿರಂತರವಾಗಿ ಬೆಂಬಲ ನೀಡುತ್ತಿರುವ ಮತ್ತು ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ಮುಖಾ-ಮುಖಿ ಎಸ್.ಟಿ. ರಂಗತಂಡ(ರಿ) ಶಿವಮೊಗ್ಗ ಈ ಅಪ್ರತಿಮ ನಾಟಕವನ್ನು ಆಯೋಜಿಸಿದೆ. ರಂಗಭೂಮಿಯ ಬೆಳವಣಿಗೆಗೆ ಶ್ರಮಿಸುತ್ತಿರುವ ಈ ತಂಡದ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ.
ಎಲ್ಲರಿಗೂ ಸ್ವಾಗತ!
ನೀವು ಬನ್ನಿ, ನಿಮ್ಮ ಸ್ನೇಹಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತಂದು ರಂಗಭೂಮಿಯನ್ನು ಹಾಗೂ ರಂಗ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಈ ಅಪ್ರತಿಮ ರಂಗಾನುಭವವನ್ನು ತಪ್ಪದೇ ವೀಕ್ಷಿಸಿ!
WhatsApp Number : 7795829207
Leave a Reply