ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ: ಆನಂದಪುರ ಬಳಿ ಕ್ಯಾಂಟರ್ ಪಲ್ಟಿ

ಶಿವಮೊಗ್ಗ: ಕಡೂರಿನಿಂದ ಸಾಗರಕ್ಕೆ ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್ ವಾಹನವೊಂದು ಆನಂದಪುರ ಸಮೀಪದ ಮುಂಬಾಳು ಕೆರೆ ಬಳಿ ಪಲ್ಟಿಯಾಗಿದೆ. ಆದರೆ, ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಘಟನೆ ವಿವರ:

ಕಡೂರಿನಿಂದ ಸಾಗರಕ್ಕೆ ಕೋಳಿ ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ವಾಹನ ಮುಂಬಾಳು ತಿರುವಿನಲ್ಲಿ ಎದುರುಗಡೆಯಿಂದ ಬರುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ವಾಹನ, ಕೆರೆಯ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ವಾಹನ ಕೆರೆಗೆ ಬೀಳುವ ಸಾಧ್ಯತೆಯಿದ್ದರೂ, ಚಾಲಕನ ಸಮಯಪ್ರಜ್ಞೆಯಿಂದ ಅದು ತಪ್ಪಿದೆ.

ಇದನ್ನು ಓದಿ : ರೈಲ್ವೆ ನೇಮಕಾತಿ 2025: SSLC, ITI, ಪದವೀಧರರಿಗೆ 6180 ಟೆಕ್ನೀಷಿಯನ್ ಹುದ್ದೆಗಳ ಬೃಹತ್ ಅವಕಾಶ! ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

ಅಪಾಯದಿಂದ ಪಾರು:

ಕ್ಯಾಂಟರ್ ಚಾಲಕ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಆದರೆ, ಕ್ಯಾಂಟರ್ ಪಲ್ಟಿಯಾದ ಪರಿಣಾಮ ಅದರಲ್ಲಿ ತುಂಬಿದ್ದ ಕೋಳಿಗಳು ಸಾವನ್ನಪ್ಪಿವೆ.

ಸ್ಥಳೀಯರ ನೆರವು:

ಘಟನೆ ನಡೆದ ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದ್ದು, ಮೃತಪಟ್ಟ ಕೋಳಿಗಳನ್ನು ಸ್ಥಳದಿಂದ ಸಾಗಿಸಿದ್ದಾರೆ.

Shivamoggaexpressnews – ಸದಾ ನಿಮ್ಮೊಂದಿಗೆ, ಕ್ಷಣ ಕ್ಷಣದ ಸುದ್ದಿಗಳೊಂದಿಗೆ!

ಜಾಹಿರಾತು:

WhatsApp Number : 7795829207


Leave a Reply

Your email address will not be published.