ಹೊಸನಗರದಲ್ಲಿ ನಾಳೆ (ಜುಲೈ 5 ರಂದು) ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ!

ಹೊಸನಗರ : ತಾಲೂಕಿನಲ್ಲಿ ಭಾರೀ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾಳೆಯು ಕೂಡ, ಜುಲೈ 5, 2025 ರಂದು ಅಂಗನವಾಡಿ, ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

 

ತಹಸೀಲ್ದಾರ್ ರಶ್ಮಿ ಹಾಲೇಶ್ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ರಜೆ ನೀಡಲಾಗಿದೆ.

ಪ್ರಮುಖ ಸೂಚನೆ: ರಜೆಯ ಕಾರಣದಿಂದ ತಪ್ಪಿಹೋಗುವ ಪಾಠ ಪ್ರವಚನಗಳನ್ನು ಮುಂದಿನ ರಜಾ ದಿನಗಳಲ್ಲಿ ನಡೆಸುವ ಮೂಲಕ ಸರಿದೂಗಿಸಿಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್‌ಪ್ರೆಸ್ ನ್ಯೂಸ್ ವೀಕ್ಷಿಸುತ್ತಿರಿ!

ಇದನ್ನು ಓದಿ : ರೈಲ್ವೆ ನೇಮಕಾತಿ 2025: SSLC, ITI, ಪದವೀಧರರಿಗೆ 6180 ಟೆಕ್ನೀಷಿಯನ್ ಹುದ್ದೆಗಳ ಬೃಹತ್ ಅವಕಾಶ! ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

ಜಾಹಿರಾತು:

WhatsApp Number : 7795829207


Leave a Reply

Your email address will not be published.