ಆನಂದಪುರ: ಮಲೆನಾಡಿನಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿರುವ ಈ ದಿನಗಳಲ್ಲಿ, ಆನಂದಪುರದ ರಾಷ್ಟ್ರೀಯ ಹೆದ್ದಾರಿಯ ಗಾಣಿಗನ ಕೆರೆ ಬಳಿ ಮಳೆ ನೀರು ನಿಂತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿತ್ತು. ರಸ್ತೆಯುದ್ದಕ್ಕೂ ಗುಂಡಿಗಳಾಗಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ಕೆಸರು ನೀರಿನಿಂದಾಗಿ ನಿತ್ಯ ಪರದಾಡಬೇಕಾಗಿತ್ತು. ವೇಗವಾಗಿ ಚಲಿಸುವ ವಾಹನಗಳಿಂದ ಕೆಸರು ನೀರು ಸಿಡಿದು, ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಳಾಗಿ ಶಾಲೆಗೆ ತಲುಪುವುದೇ ಕಷ್ಟವಾಗಿತ್ತು. ಇದಲ್ಲದೆ, ವಾಹನ ಸವಾರರಿಗೂ ಸಂಚಾರಕ್ಕೆ ಬಹಳಷ್ಟು ಅಡಚಣೆಯಾಗುತ್ತಿತ್ತು.
ಸಾರ್ವಜನಿಕರ ಈ ಸಮಸ್ಯೆಯನ್ನು ಮನಗಂಡ ಸಾಮಾಜಿಕ ಕಾರ್ಯಕರ್ತ ನಾಗರಾಜ್ ದಾಸಕೊಪ್ಪ ಅವರು ಮಾನವೀಯತೆ ಮೆರೆದಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿ ನಿಂತಿದ್ದ ಮಳೆ ನೀರು ಸುಗಮವಾಗಿ ಹರಿದುಹೋಗಲು ಕಾಲುವೆಯನ್ನು ನಿರ್ಮಿಸಿ, ಅದನ್ನು ಗಾಣಿಗನ ಕೆರೆಗೆ ಹರಿಬಿಟ್ಟಿದ್ದಾರೆ. ಈ ಮೂಲಕ ರಸ್ತೆಯಲ್ಲಿದ್ದ ನೀರಿನ ನಿಲ್ಲುವಿಕೆಯ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಿದ್ದಾರೆ.
ನಾಗರಾಜ್ ದಾಸಕೊಪ್ಪ ಅವರ ಈ ಸಮಯೋಚಿತ ಕಾರ್ಯಕ್ಕೆ ಸ್ಥಳೀಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಣ್ಣದಾದರೂ, ಸಾರ್ವಜನಿಕರ ನಿತ್ಯ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದ್ದ ಸಮಸ್ಯೆಗೆ ಸ್ಪಂದಿಸಿದ ಅವರ ಮಾನವೀಯ ನಡೆ ನಿಜಕ್ಕೂ ಪ್ರಶಂಸನೀಯ.
ವರದಿ : ಅಮಿತ್ ಆನಂದಪುರ
ಇದನ್ನು ಓದಿ : ಶಿವಮೊಗ್ಗ : ಐ ಆಮ್ ಸಾರಿ ಅಪ್ಪ ಅಮ್ಮ ಎಂದು ಡೆತ್ ನೋಟ್ ಬರೆದಿಟ್ಟು ಮದುವೆಯಾದ ಮೊದಲ ವರ್ಷದಲ್ಲೇ ಯುವಕ ಆತ್ಮಹತ್ಯೆ!! – ಪೂರ್ತಿ ಓದಲು ಲಿಂಕ್ ಕ್ಲಿಕ್ ಮಾಡಿ
ಜಾಹಿರಾತು:
WhatsApp Number : 7795829207
Leave a Reply